Pro Kabaaddi : ಪ್ಲೇ ಆಫ್ ತಲುಪಿದ ತಲೈವಾಸ್..!!
ಕಬಡ್ಡಿಯ 9ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ತಂಡ ಪ್ಲೇ ಆಫ್ ಪ್ರವೇಶಿಸಿದೆ. 21 ಪಂದ್ಯಗಳಿಂದ 66 ಅಂಕ ಸಂಪಾದಿಸಿರುವ ತಲೈವಾಸ್ 5ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ.
ನಿರ್ಣಾಯಕ ಪಂದ್ಯದಲ್ಲಿ ತಮಿಳ್ ತಲೈವಾಸ್ ಯುಪಿ ಯೋಧಾಸ್ ವಿರುದ್ಧ 43-28 ಅಂಕಗಳಿಂದ ಮಣಿಸಿತು. ಮೊದಲ ಅವಧಿಯಲ್ಲಿ ತಮಿಳ್ ತಲೈವಾಸ್ 18-9 ಅಂಕಗಳಿಂದ ಮುನ್ನಡೆ ಪಡೆಯಿತು. ತಮಿಳ್ ತಲೈವಾಸ್ ಪರ ರೈಡರ್ಗಳಾದ ನರೇಂದರ್ 10, ಅಜಿಂಕ್ಯ ಪವಾರ್ 9 ಅಂಕ ಪಡೆದರು. ಡಿಫೆಂಡರ್ಗಳಾದ ಅರ್ಪಿತ್ 5, ಹಿಮಾನ್ಶು 4 ಅಂಕ ಪಡೆದರು.
ಯುಪಿ ಯೋಧಾಸ್ ಪರ ರೈಡರ್ಗಳಾದ ಅನಿಲ್ ಕುಮಾರ್ 6, ದುರ್ಗೇಶ್ ಕುಮಾರ್ 7 ಅಂಕ ಪಡೆದರು.
ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಪಾಟ್ನ ಪೈರೇಟ್ಸ್ ವಿರುದ್ಧ 57-44 ಅಂಕಗಳಿಂದ ಗೆಲುವು ಕಂಡಿತು. ಬುಲ್ಸ್ ಪರ ರೈಡರ್ಗಳಾದ ಭರತ್ 20, ನೀರಜ್ ನರ್ವಾಲ್ 10 ಅಂಕ ಪಡೆದರು. ಕೊನೆಯ ಲೀಗ್ ಪಂದ್ಯ ಆಡಿ ಅಂಕಪಟ್ಟಿಯಲ್ಲಿ ಬುಲ್ಸ್
ಮೂರನೆ ಸ್ಥಾನ ಪಡೆಯಿತು. ಪಾಟ್ನಾ ಪರ ರೋಹಿತ್ ಗುಳಿಯಾ 10, ಆಲ್ರೌಂಡರ್ ಮೊಹ್ಮದ್ ರೆಜಾ 5 ಅಂಕ, ರೈಡರ್ ಆನಂದ್ ತೋಮರ್ 5 ಅಂಕ ತಂದುಕೊಟ್ಟರು.








