ಪಟ್ನಾ ಪೈರೇಟ್ಸ್ ವಿರುದ್ಧ ಸೋತ್ರೂ – ಅಂಕ ಪಟ್ಟಿಯಲ್ಲಿ ಬೆಂಗಳೂರು ಬುಲ್ಸ್ ನಂಬರ್ 1
ಬೆಂಗಳೂರು : ಬೆಂಗಳೂರಿನಲ್ಲಿ ಡಿಸೆಂಬರ್ 22 ರಿಂದ ನಡೆಯುತ್ತಿರುವ ಪ್ರೋ ಕಬಡ್ಡಿ 8 ಲೀಗ್ ನ ಆರಂಭಿಸಿದ ಬೆಂಗಳೂರು ಆರಂಭದಲ್ಲೇ ಮೊದಲ ಪಂದ್ಯದಲ್ಲೇ ಯೂ ಮುಂಬಾ ವಿರುದ್ಧ ಸೋಲು ಕಂಡಿತು… ಆದ್ರೆ ಅದಾದ ನಂತರದಲ್ಲಿ ಗೂಳಿಯಂತೆಯೇ ಜಬರ್ ದಸ್ತ್ ಆಗಿ ಆಡ್ತಿರುವ ಬೆಂಗಳೂರು ಬುಲ್ಸ್ ಸೋತಿರೋದು ಕಡಿಮೆ..
ಆದ್ರೆ ಇತ್ತೀಚೆಗೆ ಅಂದ್ರೆ ಭಾನುವಾರ ಪಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಸೋಲು ಕಂಡಿದೆ.. ಈ ಮೂಲಕ ಈ ಹಿಂದಿನ ಪಂದ್ಯಗಳಲ್ಲಿ ಗುಜರಾತ್ , ದಬಾಂಗ್ ಡೆಲ್ಲಿ ವಿರುದ್ಧ ಬ್ಯಾಕ್ ಟು ಬ್ಯಾಕ್ ಗೆದ್ದು ಬೀಗಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬೆಂಗಳೂರು ಬುಲ್ಸ್ ತಂಡ ನಿರಾಸೆಗೊಂಡಿದ್ರೂ ,,, ಅಂಕಪಟ್ಟಿಯಲ್ಲಿ ಮಾತ್ರ ಈಗಲೂ ಮೊದಲ ಸ್ಥಾನದಲ್ಲೇ ವಿರಾಜಮಾನವಾಗಿದೆ..
ಪ್ರೊ ಕಬಡ್ಡಿ ಲೀಗ್ ಟೂರ್ನಿಯ 8ನೇ ಆವೃತ್ತಿಯಲ್ಲಿ 12 ತಂಡಗಳಿರುವ ಅಂಕಪಟ್ಟಿಯಲ್ಲಿ 39 ಅಂಕಗಳೊಂದಿಗೆ ಬೆಂಗಳೂರು ಅಗ್ರಸ್ಥಾನ ಕಾಯ್ದುಕೊಂಡಿದೆ.
ಬೆಂಗಳೂರಿನ ವೈಟ್ ಫೀಲ್ಡ್ ನ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ ಆವರಣದಲ್ಲಿ ಭಾನುವಾರ ನಡೆದ ದ್ವಿತೀಯ ಪಂದ್ಯದಲ್ಲಿ ಪವನ್ ಕುಮಾರ್ ಸೆಹ್ರಾವತ್ ನೇತೃತ್ವದ ಬೆಂಗಳೂರು ಬುಲ್ಸ್ ತಂಡ 31-38 ಅಂಕಗಳಿಂದ ಮೂರು ಬಾರಿಯ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡದ ವಿರುದ್ಧ ಸೋಲನುಭವಿಸಿತು. ಆದರೆ ಉಭಯ ತಂಡಗಳ ನಡುವಿನ ಸೋಲಿನ ಅಂತರ 6 ಅಂಕವಿದ್ದ ಕಾರಣ 1ಅಂಕ ಗಿಟ್ಟಿಸಿದ ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ಬುಲ್ಸ್ ನಷ್ಟೇ ಪವರ್ ಫುಲ್ ಆಗಿ ಲೀಗ್ ನಲ್ಲಿ ಮಿಂಚಿರೋ ಪಟ್ನಾಗೆ ಬುಲ್ಸ್ ನಷ್ಟೇ ಅಂಕಗಳಿದ್ರೂ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ..
ಬೆಂಗಳೂರು ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್ ರೇಡರ್ ಹಾಗೂ ನಾಯಕ ಪವನ್ ಕುಮಾರ್ ಕೇವಲ ಹತ್ತು ಅಂಕಗಳಿಗೆ ಸೀಮಿತಗೊಂಡರೆ, ಡಿಫೆಂಡರ್ ಗಳಾದ ಮಹೇಂದರ್ ಸಿಂಗ್ ಮತ್ತು ಸೌರಭ್ ತಲಾ ಆರು ಅಂಕ ಸಂಪಾದಿಸಿದರು.. ಪಟ್ನಾ ಪೈರೇಟ್ಸ್ ತಂಡದ ಪರ ಮಿಂಚಿದ ಸಚಿನ್ 8 ಅಂಕ ಹಾಗೂ ಗುಮಾನ್ ಸಿಂಗ್ 7 ಅಂಕ ಗಳಿಸಿ ತಂಡದ ರೋಚಕ ಗೆಲುವುಗೆ ಕಾರಣರಾದರು.
ಇಲ್ಲಿವರೆಗೂ ಬೆಂಗಳೂರು 11 ಪಂದ್ಯಗಳಲ್ಲಿ ಆಡಿದ್ದು 3 ಸೋಲು 1 ಟೈ 7 ಜಯಗಳಿಸಿದೆ.. ಡಿ.22 ಕ್ಕೆ ಮೊದಲ ಪಂದ್ಯದಲ್ಲೇ ಬೆಂಗಳೂರು ಯೂ ಮುಂಬಾ ವಿರುದ್ಧ ಸೂಲು ಕಂಡಿತು.. ಡಿಸೆಂಬರ್ 24 ರ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗೆದ್ದು ಬೀಗಿತು.. ಡಿಸೆಂಬರ್ 26 ರಂದು ಬೆಂಗಾಳ್ ವಾರಿಯರ್ಸ್ ನ ಮಣಿಸಿತು.. ಡಿಸೆಂಬರ್ 30 ಕ್ಕೆ ಹರಿಯಾಣ ಸ್ಟೀಲರ್ಸ್ ನ ಸೋಲಿಸಿ , ಜನವರಿ 1 ರಂದು ಟೈಟನ್ಸ್ ಜೊತೆಗೆ ಟ್ರಾ ಮಾಡಿಕೊಂಡ್ರೆ , ಜನವರಿ 2ರಂದು ಪುಣೇರಿ ಪಲ್ಟನ್ಸ್ ವಿರುದ್ಧ ಗೆದ್ದು ಬೀಗಿತು..
ಜನವರಿ 6 ರಂದು ಪಿಂಕ್ ಪ್ಯಾಂಥರ್ಸ್ ಜೊತೆಗೆ ಗೆಲುವಿನ ಬಳಿಕ , ಜನವರಿ 9 ರಂದು ಯುಪಿ ಜೊತೆಗಿನ ರೋಚಕ ಸೆಣಸಾಟದ ಬಳಿಕವೂ ಸೋಲು ಕಂಡ ನಂತರ ,, ಜನವರಿ 12 ರಲ್ಲಿ ದಬಾಂಗ್ ಡೆಲ್ಲಿ ವಿರುದ್ಧ ಗೆದ್ದು , ಜನವರಿ 14 ಕ್ಕೆ ಗುಜರಾತ್ ಜೇಂಟ್ಸ್ ನ ಮಣಿಸಿ ಜನವರಿ 14 ರಂದು ಪಟ್ನಾ ವಿರುದ್ಧ ಸೋಲು ಕಂಡಿದೆ..