Pro Kabaddi 2022 : ಜೇಂಟ್ಸ್ ವಿರುದ್ಧ ಗೆದ್ದು ಬೀಗಿದ ಪ್ಯಾಂಥರ್ಸ್…!!!
ಬೆಂಗಳೂರು : ಸೋಮವಾರ ನಡೆದ ಪ್ರೋ ಕಬಡ್ಡಿ ಲೀಗ್ ನ ಪಂದ್ಯದಲ್ಲಿ ಗುಜರಾತ್ ಜೇಂಟ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ದಾಖಲಿಸಿದೆ.
ದೀಪಕ್ ಹೂಡಾ ಅವರು ಮಿಂಚಿನ ಆಟವಾಡಿ ತಂಡದ ಗೆಲುವಿಗೆ ನೆರವಾದರು.. ಸೋಮವಾರ ನಡೆದ ಪಂದ್ಯದಲ್ಲಿ ಜೈಪುರ್ 36-31 ರಿಂದ ಜೈಂಟ್ಸ್ ತಂಡವನ್ನು ಮಣಿಸಿತು.
ಈ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಸದ್ಯ ಲೀಗ್ ನಲ್ಲಿ 8ನೇ ಜಯ ದಾಖಲಿಸಿದೆ.. 51 ಅಂಕ ಸೇರಿಸಿ 5ನೇ ಸ್ಥಾನದಲ್ಲಿದೆ. ಇನ್ನು ಗುಜರಾತ್ ಜೇಂಟ್ಸ್ 44 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.