Pro kabaddi 2022 : ರೇಡ್ ಪಾಯಿಂಟ್ಸ್ ಟೇಬಲ್ ನಲ್ಲಿ ನಮ್ಮ ಗೂಳಿಯೇ ನಂ. 1….
ಡಿಸೆಂಬರ್ 22 ರಿಂದ ಪ್ರಾರಂಭವಾಗಿರುವ ಪ್ರೋ ಕಬಡ್ಡಿ (2022) ಸೀಸನ್ 8ರ ಎಲ್ಲಾ ಪಂದ್ಯಗಳು ಕಬಡ್ಡಿ ಪ್ರಿಯರನ್ನ ಥ್ರಿಲ್ ಗೊಳಿಸುತ್ತಿದೆ. ಪ್ರತಿ ಪಂದ್ಯಗಳೂ ಸಹ ರೋಚಕತೆಯಿಂದ ಕೂಡಿದೆ… ಅದ್ರಲ್ಲೂ ದಬಾಂಗ್ ಡೆಲ್ಲಿ , ಬೆಂಗಳೂರು ಬುಲ್ಸ್ , ಪಟ್ನಾ ಪೈರೇಟ್ಸ್ ಲೀಗ್ ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿ ಕ್ರಮವಾಗಿ ಅಂಕಪಟ್ಟಿಯಲ್ಲಿ ಟಾಪ್ 3 ಸ್ಥಾನಗಳಲ್ಲೇ ಉಳಿದಿದ್ದಾರೆ.. ಇನ್ನೇನು ಲೀಗ್ ಕೊನೆ ಹಂತವೂ ತಲುಪುತ್ತಿದ್ದು , ಪ್ಲೇ ಆಫ್ ನಲ್ಲಿ ಸ್ಥಾನ ಖಾಯಂ ಮಾಡಿಕೊಳ್ಳಲು ,ಬುಲ್ಸ್ ದೆಹಲಿ , ಪೈರೇಟ್ಸ್ ಹೋರಾಡುತ್ತಿದ್ರೆ ,,, ಪ್ಲೇ ಆಫ್ ಗೆ ತಲುಪಲು ಹರಿಯಾಣ ಸ್ಟೀಲರ್ಸ್ ,ಯೂ ಮುಂಬಾ , ಯುಪಿ ಯೋಧಾ ಹೋರಾಡುತ್ತಿದ್ದಾರೆ…
Cinema Updates : Top 5 ಸಿನಿಮಾ ನ್ಯೂಸ್ @ 4 PM
ಎಲ್ಲಾ ತಂಡಗಳಲ್ಲು ಆಲ್ ರೌಂಡರ್ ಗಳು , ಸ್ಟಾರ್ ರೈಡರ್ , ಡಿಫೆಂಡರ್ ಗಳು ಇದ್ದಾರೆ… ಅದ್ರಲ್ಲೂ ರೈಡರ್ಸ್ ವಿಚಾರಕ್ಕೆ ಬಂದರೆ ,, ಲೀಡರ್ ಬೋರ್ಡ್ ನಲ್ಲಿ ನಮ್ಮ ಬೆಂಗಳೂರಿನ ಗೂಳಿ , ನಾಯಕ ಪವನ್ ಶೆರಾವತ್ ಅಗ್ರಸ್ಥಾನದಲ್ಲಿದ್ದಾರೆ..
TOP 5 ನ್ಯೂಸ್ @ 4 : ರಾಜ್ಯ ಬಜೆಟ್ , ಜೀವ ಉಳಿಸಿದ ಟ್ರಾಫಿಕ್ ಪೊಲೀಸ್…..
ಹಾಗಾದ್ರೆ,….. ರೇಡ್ ಪಾಯಿಂಟ್ಸ್ ಟೇಬಲ್ ನಲ್ಲಿ ಈ ಲೀಗ್ ನಲ್ಲಿ ಟಾಪ್ 5 ರಲ್ಲಿ ಯಾವೆಲ್ಲಾ ರೈಡರ್ಸ್ ಇದ್ದಾರೆ…????
- ಪವನ್ ಶೆರಾವತ್ – ಬೆಂಗಳೂರು ಬುಲ್ಸ್ ( ಕ್ಯಾಪ್ಟನ್ ) – 17 ಪಂದ್ಯಗಳಿಂದ 276 ರೇಡ್ ಪಾಯಿಂಟ್ಸ್…
- ಮಣೀಂದರ್ ಸಿಂಗ್ – ಬೆಂಗಾಲ್ ವಾರಿಯರ್ಸ್ – 15 ಪಂದ್ಯಗಳಿಂದ 187 ರೇಡ್ ಪಾಯಿಂಟ್ಸ್…
- ಅರ್ಜುನ್ ದೇಶ್ವಾಲ್ – ಜೈಪುರ ಪಿಂಕ್ ಪ್ಯಾಂಥರ್ಸ್ – 14 ಪಂದ್ಯಗಳಿಂದ 169 ರೇಡ್ ಪಾಯಿಂಟ್ಸ್…
- ನವೀನ್ ಕುಮಾರ್ – ದಬಾಂಗ್ ದೆಲ್ಲಿ – 9 ಪಂದ್ಯಗಳಿಂದ 135 ರೇಡ್ ಪಾಯಿಂಟ್ಸ್…
- ವಿಕಾಸ್ ಕೊಂಡಲಾ – ಹರಿಯಾಣ ಸ್ಟೀಲರ್ಸ್ -15 ಪಂದ್ಯಗಳಿಂದ 123 ರೇಡ್ ಪಾಯಿಂಟ್ಸ್…