ಮಹಾಸಮರಕ್ಕೆ ಬ್ಲೂ ಪ್ಯಾಂಥರ್ಸ್ ಸಜ್ಜು : ಟೀಂ ಕಾಂಬಿನೇಷನ್ ಫಿಕ್ಸ್ Batting saaksha tv
ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಅಬ್ಬರಿಸಿ ಬೊಬ್ಬಿರಿದಿದೆ. ಬ್ಯಾಟಿಂಗ್ನಲ್ಲಿ ಮಿಂಚಿದೆ. ಬೌಲಿಂಗ್ ನಲ್ಲೂ ಶಕ್ತಿ ತೋರಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ 2 ಅಭ್ಯಾಸ ಪಂದ್ಯಗಳನ್ನು ಚೇಸ್ ಮಾಡಿ ಗೆದ್ದಿದೆ. ಎರಡೂ ಪಂದ್ಯಗಳಿಂದ ಟೀಮ್ ಇಂಡಿಯಾ ಪೇರಿಸಿದ ಒಟ್ಟು ಮೊತ್ತ 345 ರನ್. ಕಳೆದುಕೊಂಡಿತ್ತು ಜಸ್ಟ್ ಐದೇ ಐದು ವಿಕೆಟ್. ಇನ್ನೊಂದು ಕಡೆಯಲ್ಲಿ ಬೌಲರ್ಗಳು ಕೂಡ ಎರಡು ಪಂದ್ಯಗಳಿಂದ 10 ವಿಕೆಟ್ ಪಡೆದುಕೊಂಡಿದ್ದಾರೆ.
ಎರಡು ಅಭ್ಯಾಸ ಪಂದ್ಯಗಳಿಂದ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಬಗ್ಗೆ ಇದ್ದ ಸಂದೇಹಕ್ಕೆ ಪಾಸಿಟಿವ್ ಉತ್ತರ ಸಿಕ್ಕಿತ್ತು. ಡೆತ್ ಬೌಲಿಂಗ್ ಬಗ್ಗೆ ಇದ್ದ ಭಯವೂ ಮಾಯವಾಯಿತು. ಸ್ಪಿನ್ನರ್ ಗಳ ಫಾರ್ಮ್ ಬಗ್ಗೆ ಇದ್ದ ಸಂಶಯ ದೂರವಾಯಿತು. ರೋಹಿತ್ ಶರ್ಮಾ ಮತ್ತು ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್ ಲಯದ ಬಗ್ಗೆಯೂ ಕ್ಲಾರಿಟಿ ಸಿಕ್ಕಿತು. ಹಾರ್ದಿಕ್ ಪಾಂಡ್ಯ ರೋಲ್, ರವೀಂದ್ರ ಜಡೇಜಾ ಸ್ಥಾನ ಎಲ್ಲದಕ್ಕೂ ಅಭ್ಯಾಸ ಪಂದ್ಯಗಳಿಂದ ಉತ್ತರ ಸಿಕ್ಕಿದೆ.
ಎರಡೂ ಪಂದ್ಯಗಳಲ್ಲೂ ಓಪನರ್ ಗಳು ಪಂದ್ಯವನ್ನು ಆಲ್ಮೋಸ್ಟ್ ಗೆಲ್ಲಿಸಿಕೊಟ್ಟಿದ್ದಾರೆ. ಕೆ.ಎಲ್ ರಾಹುಲ್ ಅಬ್ಬರ ಹೇಗಿರುತ್ತದೆ ಅನ್ನುವುದು ಗೊತ್ತಾಗಿದೆ. ಇಶನ್ ಕಿಶನ್ ತಾಕತ್ತಿನ ಝಲಕ್ ಸಿಕ್ಕಿದೆ. ರೋಹಿತ್ ಹಿಟ್ ಮ್ಯಾನ್ ಅನ್ನುವುದು ಕನ್ ಫರ್ಮ್ ಆಗಿದೆ. ಸೂರ್ಯ ಕುಮಾರ್ ಆಟದ ಬೆಲೆ ಗೊತ್ತಾಗಿದೆ. ಹಾರ್ದಿಕ್ ಪವರ್ ಮತ್ತು ವಿರಾಟ್ ಟ್ರಿಕ್ಸ್ ಬಗ್ಗೆ ಅರಿವಿದೆ.
ಬೌಲರ್ಗಳ ಬಗ್ಗೆ ಮಾತನಾಡಿದರೆ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಪಿಚ್ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಅನ್ನುವುದನ್ನು ಕಲಿತುಕೊಂಡಿದ್ದಾರೆ. ಹೊಸ ಚೆಂಡಿನಲ್ಲಿ ಅಶ್ವಿನ್ ಮೂಲಕ ಬೌಲಿಂಗ್ ಆರಂಭಿಸುವ ಸುಳಿವು ಸಿಕ್ಕಿದೆ. ಭುವಿಯ ಡೆತ್ ಓವರ್ ಕಮಾಲ್, ಬುಮ್ರಾ ಪಾಲಿಗೆ ಬೋನಸ್ ಆಗಿದೆ. ಜಡೇಜಾ ಬೌಲಿಂಗ್ ಕಂಟ್ರೋಲ್ ಹೊಸ ಆಸೆ ಹುಟ್ಟಿಸಿದೆ. ಒಟ್ಟಿನಲ್ಲಿ ಎರಡು ಅಭ್ಯಾಸ ಪಂದ್ಯಗಳ ಗೆಲುವು ವಿಶ್ವಕಪ್ ಎತ್ತುವ ಆಸೆಯನ್ನು ದೊಡ್ಡದು ಮಾಡಿದೆ.