ತ್ರಿಕೋನ ಸಿನಿಮಾದ ಟೀಸರ್ ಗೆ ಅದ್ಭುತ ರೆಸ್ಪಾನ್ಸ್

1 min read
Trikona’ kannada film saakshatv

ತ್ರಿಕೋನ ಸಿನಿಮಾದ ಟೀಸರ್ ಗೆ ಅದ್ಭುತ ರೆಸ್ಪಾನ್ಸ್

Trikona’ kannada film saakshatvಬರ್ಫಿ, ಫೆರೋಲ್ ಚಿತ್ರದ ನಿರ್ದೇಶಕ ರಾಜಶೇಖರ್ ನಿರ್ಮಾಣದ ತ್ರಿಕೋನ ಸಿನಿಮಾದ ಟೀಸರ್ ರಿಲೀಸ್ ಆಗಿ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿದೆ. ಸದ್ಯ ಯುಟ್ಯೂಬ್ ನಲ್ಲಿ ತ್ರಿಕೋನ ಟೀಸರ್ ಒಂದು ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದು ಮುನ್ನುಗ್ಗುತ್ತಿದೆ. ಈ ಚಿತ್ರಕ್ಕೆ ರಾಜಶೇಖರ್ ಕಥೆ ಇದ್ದು, ಚಂದ್ರಕಾಂತ್ ಚಿತ್ರಕತೆ ಬರೆದು ನಿರ್ದೇಶಿಸಿದ್ದಾರೆ.

ಪೊಲೀಸ್ ಪರ್ಕಿ ಪ್ರೋಡಕ್ಷನ್ ಬ್ಯಾನರ್ ನಡಿ ಸಿನಿಮಾ ಮೂಡಿಬಂದಿದೆ. ಈ ಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ತಯಾರಾಗುತ್ತಿದೆ. ಸಿನಿಮಾದ ಹೆಸರೇ ಹೇಳುವಂತೆ ಇಂದು ಮೂರು ಕಥೆಗಳನ್ನ ಒಳಗೊಂಡ ಸಿನಿಮಾವಾಗಿದ್ದು, ಅಹಂ, ಶಕ್ತಿ ಮತ್ತು ತಾಳ್ಮೆ ಇವುಗಳ ಮೇಲೆ ಕಥೆ ನಿಂತಿದೆ. ನಾಲ್ಕು ಹಂತದಲ್ಲಿ 50 ದಿನಗಳ ಕಾಲ ಬೆಂಗಳೂರು, ಸುಬ್ರಮಣ್ಯ, ಕಡಬ, ಪುತ್ತೂರು, ಮಂಗಳೂರು, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಮೂರು ವಯೋಮಾನದವರ ಜೀವನದಲ್ಲಿ ನಡೆಯುವ ಸನ್ನಿವೇಶಗಳು ಚಿತ್ರದಲ್ಲಿ ತೋರಿಸಲಾಗಿದ್ದು, ಯಂಗ್ ಬ್ಯುಸಿನೆಸ್ ಮ್ಯಾನ್ ಗಾಗಿ ರಾಜ್ ವೀರ್, 40ರ ವಯಸ್ಸಿನ ಜೋಡಿಗಳಾಗಿ ಅಚ್ಯುತರಾವ್-ಸುಧಾರಾಣಿ, ಹಿರಿಯ ದಂಪತಿಗಳಾಗಿ ಸುರೇಶ್ ಹೆಬ್ಳಿಕರ್-ಲಕ್ಷ್ಮೀಘಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಧು ಮಹಾರಾಜ್ ಸೇರಿದಂತೆ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಮುಖ್ಯವಾಗಿ ದೇಹ ಪ್ರದರ್ಶನದಲ್ಲಿಎರಡು ಬಾರಿ ಮಿ.ಕರ್ನಾಟಕ, ಒಮ್ಮೆ ಮಿ.ಇಂಡಿಯಾ ಪ್ರಶಸ್ತಿ ಪಡೆದಿರುವ ಬಳ್ಳಾರಿಯ ಮಾರುತೇಶ್ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸುರೇಂದ್ರನಾಥ್ ಸಂಗೀತ ನೀಡಿದ್ದು, ಶ್ರೀನಿವಾಸ್ ಛಾಯಾಗ್ರಹಣ, ಜೀವನ್ ಪ್ರಕಾಶ್.ಎನ್ ಸಂಕಲನವಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd