ಒಮಿಕ್ರಾನ್ ಗೆ ಹೆದರಿ ಪತ್ನಿ, ಮಕ್ಕಳ ಕೊಲೆ
ಕಾನ್ಪುರ : ಭಾರತಕ್ಕೆ ಎಂಟ್ರಿ ಕೊಟ್ಟಿರುವ ಒಮಿಕ್ರಾನ್ ಎಲ್ಲರ ಚಿಂತೆಗೀಡು ಮಾಡಿದೆ. ಕೊರೊನಾ, ಡೆಲ್ಟಾ, ಬ್ಲ್ಯಾಕ್ ಫಂಗಸ್ ಸೋಂಕಿನಿಂದ ತತ್ತರಿಸಿದ್ದ ಜನರಿಗೆ ಒಮಿಕ್ರಾನ್ ಆಗಮನ ತೀವ್ರ ಭಯವನ್ನುಂಟು ಮಾಡಿದೆ. ಈ ಮಧ್ಯೆ ಕಾನ್ಪುರದ ಮೆಡಿಕಲ್ ಕಾಲೇಜಿನ ಪ್ರೋಫೆಸರ್, ಒಮಿಕ್ರಾನ್ ಸೋಂಕಿಗೆ ಹೆದರಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾರೆ.
ಚಂದ್ರಪ್ರಭಾ, ಶಿಖರ್ ಸಿಂಗ್, ಖುಷಿ ಸಿಂಗ್ ಕೊಲೆಯಾದವರಾಗಿದ್ದು, ಪ್ರೊಫೆಸರ್ ಸುಶೀಲ್ ಸಿಂಗ್ ಕೊಲೆ ಆರೋಪಿಯಾಗಿದ್ದಾರೆ.
ಸುಶೀಲ್ ಸಿಂಗ್ ಕೊಲೆ ಮಾಡುವುದಕ್ಕೂ ಮುನ್ನ ತನ್ನ ಸಹೋದರನಿಗೆ ವಾಟ್ಸಪ್ ಮೂಲಕ ಮಾಹಿತಿ ನೀಡಿದ್ದನಂತೆ. ಈ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ನಾನು ನನ್ನ ಪತ್ನಿ ಮತ್ತು ಮಕ್ಕಳನ್ನು ಕೊಲೆ ಮಾಡುತ್ತಿದ್ದೇನೆ. ಇದಕ್ಕೆ ಯಾರೂ ಹೊಣೆಗಾರರಲ್ಲ ಎಂದು ಸುಶೀಲ್ ಸಿಂಗ್ ಡೆತ್ ನೋಟ್ ನಲ್ಲಿ ಬರೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಪತ್ನಿ ಮಕ್ಕಳನ್ನು ಕೊಲೆ ಮಾಡಿರುವ ಸುಶೀಲ್ ಬಳಿಕ ಪೊಲೀಸರಿಗೆ ಹೆದರಿ ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ತಿಳಿದುಬಂದಿದೆ.









