Project K : ಪ್ರಭಾಸ್ ಅಭಿಮಾನಿಗಳಿಗೆ ರೋಚಕ ಅಪ್ಡೇಟ್ – ಪ್ರಾಜೆಕ್ಟ್ ಕೆ ರಿಲೀಸ್ ಡೇಟ್ ಅನೌನ್ಸ್…
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮಹಾನಟಿ ಸಿನಿಮಾ ಖ್ಯಾತಿಯ ನಾಗ ಅಶ್ವಿನ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಪ್ರಾಜೆಕ್ಟ್-ಕೆ ಎಂಬ ವರ್ಕಿಂಗ್ ಟೈಟಲ್ ನಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಈ ಸಿನಿಮಾದ ಮೇಲೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ ರೋಬೋಟಿಕ್ಸ್ ತಂತ್ರಜ್ಞಾನವನ್ನ ಆಧರಿಸಿದೆ.
ಇಂದು ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರಾಜೆಕ್ಟ್ ಕೆ ಚಿತ್ರ ತಂಡ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಿದೆ. ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಪೋಸ್ಟರ್ ಮೂಲಕ ಅಭಿಮಾನಿಗಳನ್ನ ಅಚ್ಚರಿಗೊಳಿಸಿದೆ. ಪಾಜೆಕ್ಟ್ ಕೆ ಜನವರಿ 12 2024 ರಂದು ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ದೈತ್ಯ ಕೈಯೊಂದು ಆಕಾಶಕಾಯದ ಮೇಲೆ ಬಿದ್ದಿದ್ದು ಸುತ್ತ ಯಂತ್ರಗಳು ಸುತ್ತುವರೆದಿವೆ. ಅದರ ಮುಂದೆ ಮೂರು ಜನ ಗನ್ ಹಿಡಿದು ನಿಂತಿರು ಪೋಸ್ಟರ್ ಅನ್ನ ಬಿಡುಗಡೆ ಮಾಡಲಾಗಿದೆ. ದಿ ವರ್ಲ್ಡ್ ಈಸ್ ವೇಯ್ಟಿಂಗ್ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಇತ್ತೀಚೆಗಷ್ಟೇ ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ಸುದ್ದಿ ಹರಿದಾಡಿತ್ತು. ಆ ಸುದ್ದಿಯಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ಬಾಲಿವುಡ್ ಬಿಗ್ ಸ್ಟಾರ್ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 50 ವರ್ಷಗಳ ವೃತ್ತಿಜೀವನವನ್ನು ಪೂರೈಸಿರುವ ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ ಅಶ್ವಿನಿ ದತ್ ಅವರು ಸುಮಾರು 500 ಕೋಟಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Project K: Exciting Update for Prabhas Fans – Project K Release Date Announced…