ಭಾರತದ ಸ್ಟಾರ್ ತಾರಾ ಜೋಡಿ ಎಂದರೆ ತಟ್ಟನೆ ನೆನಪಿಗೆ ಬರುವ ಹೆಸರು ದೀಪಿಕಾ ಹಾಗೂ ರಣವೀರ್ ಜೋಡಿ. ಈ ಜೋಡಿಯನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. ಈ ಜೋಡಿ ಸಪ್ತಪದಿ ತುಳಿದಾಗ ಶುಭಹಾರೈಸಿದ್ದರು.
ಸ್ಟಾರ್ ನಟರ ಜೀವನ ಅಂದರೆ, ಹೈ ಫೈ ಇರುತ್ತದೆ. ಅವರಿಗೆ ಏನು ಕೊರತೆ ಅನ್ನೋವುದೇ ಇರುವುದಿಲ್ಲ ಎಂದು ಎಲ್ಲರೂ ಅಂದು ಕೊಂಡಿರುತ್ತಾರೆ. ಅಲ್ಲದೆ ಇವರು ನೀಡಿದ ಮಾತುಗಳನ್ನು (ಪ್ರಾಮಿಸ್) ಸುಲಭವಾಗಿ ಈಡೇರಿಸ ಬಹದು ಎಂಬ ಕಲ್ಪನೆ ಎಲ್ಲರಲ್ಲೂ ಇರುತ್ತದೆ. ಆದರೆ ಇವರಲ್ಲೂ ನ್ಯೂನತೆಗಳು ಇರುತ್ತವೆ.
ಹೌದು. ರಣವೀರ್ ಸಿಂಗ್, ಮದುವೆಗೂ ಮುನ್ನ ದೀಪಿಕಾ ಪಡುಕೋಣೆ ಅವರಿಗೆ ನೀಡಿದ್ದ ಒಂದು ಮಾತನ್ನು ಇನ್ನು ನಡೆಸಿಕೊಟ್ಟಿಲ್ಲ. ಹಾಗಿದ್ದರೆ ಆ ಮಾತು ಏನು ? ಎಂಬ ಪ್ರಶ್ನೆ ನಿಮ್ಮೆಲ್ಲರ ತಲೆಯಲ್ಲೂ ಒಡುತ್ತಿರಬಹುದು.
“ನಾನು ದೀಪಿಕಾ ಮತ್ತು ಅವರ ಕುಟುಂಬವನ್ನು ಮೆಚ್ಚಿಸಲು ತುಂಬಾ ಉತ್ತಮವಾದ ಮಟರ್ ಚಿಕನ್ ತಯಾರಿಸುತ್ತೇನೆ ಎಂದು ಹೇಳುತ್ತಿದ್ದೆ. ರಣವೀರ್ ತಮ್ಮ ಕೈಯಾರೆ ಮಾಡಿದ ಮಟರ್ ಚಿಕನ್ ಅನ್ನು ದೀಪಿಕಾ ಮತ್ತು ಅವಳ ಕುಟುಂಬಕ್ಕೆ ಕೊಡುವ ಭರವಸೆಯನ್ನು ಈಡೇರಿಸಲಿಲ್ಲ. “ಅವರ ಕುಟುಂಬಕ್ಕೆ ನಾನು ಚಿಕನ್ ನೀಡಿದ್ದೇನೆ ಆದರೆ ಅದರಲ್ಲಿ ಮೋಸ ಮಾಡಿದೆ” ಎಂದು ಅವರು ಹೇಳಿದರು. “ರೆಡಿಮೇಡ್ ಮಿಶ್ರಣಗಳನ್ನು ಸೇರಿಸುವ ಮೂಲಕ ನಾನು ಅದನ್ನು ತಯಾರಿಸಿದೆ. ನೀವು ರೆಡಿಮೇಡ್ ಪ್ಯಾಕೆಟ್ ಅನ್ನು ಬಳಸಿದರೆ ಯಾರೂ ಗಮನ ಕೊಡುವುದಿಲ್ಲ ಎಂದು ನಾನು ಭಾವಿಸಿದೆವು, ಆಗ ನನಗೆ ಬೇರೆ ದಾರಿ ಇರಲಿಲ್ಲ ಏಕೆಂದರೆ ಮೊಟ್ಟೆ ಮಾಡುವುದನ್ನು ಬಿಟ್ಟು ಬೇರೆ ಅಡುಗೆ ನಾನು ಅರಿಯೆ” ಎಂದಿದ್ದಾರೆ.
ದೀಪಿಕಾ ಅಡುಗೆಯನ್ನು ಮಾಡುವುದನ್ನು ಇಷ್ಟಪಡುತ್ತಾರೆ ಎಂದು ರಣವೀರ್ ಹೇಳಿದರು. “ದೀಪಿಕಾ ಅಡುಗೆಯ ಬಗ್ಗೆ ಒಲವು ಹೊಂದಿದ್ದಾಳೆ ಮತ್ತು ಈ ಕೆಲಸದಲ್ಲಿ ಅವಳು ನನಗಿಂತ ಉತ್ತಮ. ಹಾಗಾಗಿ ಅಡುಗೆಮನೆಯಲ್ಲಿ ಅವರಿಗೆ ಸಹಾಯ ಮಾಡುತ್ತೇನೆ. ಲಾಕ್ ಡೌನ್ ಅವಧಿಯಲ್ಲಿ ಅವಳು ನನಗೆ ಥಾಯ್ ಆಹಾರವನ್ನು ಮಾಡಿದ್ದಳು, ನಾನು ಅವಳಿಗೆ ಅಡುಗೆಮನೆಯಲ್ಲಿ ಸಹಾಯ ಮಾಡಿದ್ದೇನೆ” ಎಂದು ತಿಳಿಸಿದ್ದಾರೆ.








