ದೊಡ್ಮನೆ ಪ್ರಾಪರ್ಟಿ ಮೇಲೆ ರಾಬರ್ಟ್ ಕಣ್ಣು : ಉಮಾಪತಿ ಹೇಳಿದ್ದೇನು..?
ಬೆಂಗಳೂರು : ದರ್ಶನ್ ಹೆಸರಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಸಿಗುತ್ತಿದ್ದು, ಇದೀಗ ದೊಡ್ಮನೆ ಪ್ರಾಪರ್ಟಿ ಮೇಲೆ ದರ್ಶನ್ ಕಣ್ಣಿಟ್ಟಿದ್ದರು ಎಂದು ನಿರ್ಮಾಪಕ ಉಮಾಪತಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ಉಮಾಪತಿ. ನಮ್ಮಿಬ್ಬರ ಮಧ್ಯೆ ಆಸ್ತಿ ವಿಚಾರ ಬಂದಿದ್ದು ನಿಜ. ಆ ಆಸ್ತಿ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರದ್ದು. ಅದನ್ನ ದರ್ಶನ್ ಕೇಳಿದ್ದರು. ಅದು ದೊಡ್ಡ ಮನೆಯವರ ಆಸ್ತಿ, ಹಾಗಾಗಿ ನಾನು ಅದನ್ನು ಕೊಡೊದಿಲ್ಲ ಎಂದು ಹೇಳಿದ್ದೆ. ಅಲ್ಲಿಗೆ ದರ್ಶನ್ ಸುಮ್ಮನಾಗಿದ್ದರು. ಅಲ್ಲದೇ ಅದರ ಬದಲು ಬೇರೆ 2 ಎಕರೆ ಜಾಗವನ್ನು ಕೊಡುವುದಾಗಿ ದರ್ಶನ್ ಗೆ ಮನವರಿಕೆ ಮಾಡಿದ್ದಾಗಿ ಅದಕ್ಕೆ ದರ್ಶನ್ ಒಪ್ಪಿಕೊಂಡಿದ್ದರು ಎಂಬ ವಿಚಾರವನ್ನು ಇದೀಗ ಸ್ವತಃ ಉಮಾಪತಿ ಬಹಿರಂಗಪಡಿಸಿದ್ದಾರೆ.
ಇನ್ನು ನಾನು ಆಸ್ತಿ ಕೊಡಲಿಲ್ಲ ಎಂದು ದರ್ಶನ್ ಬೇಜಾರಾಗಿಲ್ಲ ಅಂದುಕೊಂಡಿದ್ದೇನೆ. ನನ್ನ ಮತ್ತು ದರ್ಶನ್ ನಡುವೆ ಏನೇನೋ ನಡೆದಿರುತ್ತದೆ. ದೊಡ್ಡಮನೆಯವರ ಆಸ್ತಿಯನ್ನು ದರ್ಶನ್ ಅವರಿಗೆ ಕೊಟ್ಟರೇ ಸರಿ ಆಗುತ್ತಾ ನೀವೆ ಯೋಚಿಸಿ ಎಂದು ಪ್ರಶ್ನಿಸಿದ್ದಾರೆ.
ಇದೀಗ ಉಮಾಪತಿ ಅವರು ಈ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದಂತೆ 25 ಕೋಟಿ ವಂಚನೆ ಪ್ರರಕಣಕ್ಕೆ ರೆಕ್ಕೆಪುಕ್ಕಗಳು ಸಿಕ್ಕಿವೆ.