ಕಲಬುರಗಿ: ಜೈಲಿನಲ್ಲಿ ಗುಟ್ಕಾ, ಸಿಗರೇಟ್ ಸೇರಿದಂತೆ ಕೆಲವು ವಸ್ತುಗಳು ಬೇಕೆಂದು ವಿಚಾರಣಾಧೀನ ಕೈದಿಗಳು ಪ್ರತಿಭಟನೆ ನಡೆಸಿರುವ ಘಟನ ನಡೆದಿದೆ.
ಈ ಪ್ರತಿಭಟನೆ ಕಲಬುರಗಿ ಕೇಂದ್ರ ಕಾರಾಗೃಹದ (Kalaburagi Jail)ಲ್ಲಿ ನಡೆದಿದೆ. ಸುಮಾರು 70 ಕ್ಕೂ ಅಧಿಕ ಕೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆ ಅವರಿಗೆ ಗುಟ್ಕಾ, ಬೀಡಿ, ಸಿಗರೇಟ್ ಸಿಗುತ್ತಿದ್ದವು ಎನ್ನಲಾಗಿದೆ. ಸದ್ಯ ಈಗ ಎಲ್ಲವನ್ನೂ ಬಂದ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ಜೈಲಿನಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ.








