ಶಿವಮೊಗ್ಗ: ಬೀಡಿ, ಸಿಗರೇಟ್ ಬೇಕೆಂದು ಸೋಗಾನೆಯಲ್ಲಿನ ಕೇಂದ್ರ ಕಾರಾಗೃಹದಲ್ಲಿ (Jail) ಕೈದಿಗಳು ಪ್ರತಿಭಟನೆ ನಡೆಸಿರುವ ಘಠನೆ ನಡೆದಿದೆ.
ಜೈಲು ಮ್ಯಾನುಯಲ್ ನಲ್ಲಿ ನಿಷೇಧಿತ ವಸ್ತುಗಳು ಎಂಬ ಕಾರಣಕ್ಕೆ ಬೀಡಿ, ಸಿಗರೇಟು ಕೊಂಡೊಯ್ಯಲು ಕೈಗಾರಿಕ ಭದ್ರತಾ ಪಡೆ ಮತ್ತು ಜೈಲು ಸಿಬ್ಬಂದಿ ನಿರ್ಬಂಧ ಹಾಕಿದ್ದಾರೆ. ಕೈದಿಗಳಿಗೆ ಬೀಡಿ, ಸಿಗರೇಟ್ ದೊರೆಯುತ್ತಿಲ್ಲ. ಬೀಡಿ, ಸಿಗರೇಟು ಕೊಡಬೇಕು ಎಂದು ಆಗ್ರಹಿಸಿ ಕೈದಿಗಳು ಸೋಮವಾರ ಬೆಳಗ್ಗೆ ಉಪಹಾರ ತ್ಯಜಿಸಿ ಪ್ರತಿಭಟಿಸಿದ್ದಾರೆ. ನಂತರ ಅಧಿಕಾರಿಗಳು ಪ್ರತಿಭಟನೆ ಕೈ ಬಿಡುವಂತೆ ತಿಳಿ ಹೇಳಿದರು.
ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ (Darshan) ಸಿಗರೇಟು ಸೇದುತ್ತಿರುವ ಫೋಟೊ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಶಿವಮೊಗ್ಗ (Shivamogga) ಜೈಲಿನ ಮೇಲೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಆ ವೇಳೆ ಬೀಡಿ, ಸಿಗರೇಟು, ಬೆಂಕಿ ಪೊಟ್ಟಣಗಳು ಸಿಕ್ಕಿದ್ದವು. ಹೀಗಾಗಿ ಪ್ರತಿಯೊಂದು ಜೈಲಿನಲ್ಲಿ ನಿಷೇಧಿತ ವಸ್ತುಗಳನ್ನು ಒಯ್ಯದಂತೆ ನಿಗಾ ವಹಿಸಲಾಗಿದೆ.








