Pruthviraj : ಅಕ್ಷಯ್ ಕುಮಾರ್ ಪೃಥ್ವಿರಾಜ್ ಸಿನಿಮಾ ನೋಡಲಿರುವ ಅಮಿತ್ ಶಾ

1 min read

ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಫ್ಲಾಪ್ ಆಗ್ತಿವೆ.. ಈ ನಡುವೆ ಭೂಲ್ ಭುಲಯ್ಯ ಸಿನಿಮಾ ಕೊಂಚ ಬಾಲಿವುಡ್ ನ ಮಾನ ಉಳಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣ್ತಿದೆ..

ಅಂದ್ಹಾಗೆ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷೆಯ ಪೃಥ್ವಿರಾಜ್ ಸಿನಿಮಾ ರಿಲೀಸ್ ಆಗಲಿದೆ.. ವಿಶೇಷ ಅಂದರೆ ಈ ಸಿನಿಮಾವನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೀಕ್ಷಣೆ ಮಾಡಲಿದ್ದಾರೆ.

ಈ ಬಾರಿ ಅಕ್ಷಯ್ ಕುಮಾರ್ ಪೃಥ್ವಿರಾಜ್ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಈ ಸಿನಿಮಾವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೋಡಲಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಚಿತ್ರತಂಡ ಅಮಿತ್ ಶಾ ಜೊತೆ ಮಾತುಕತೆ ಕೂಡ ಆಡಿದೆ ಎಂದು ಹೇಳಲಾಗಿದೆ..

ಅಂದ್ಹಾಗೆ ಜೂನ್ 3 ರಂದು ಪೃಥ್ವಿರಾಜ್ ಸಿನಿಮಾ ಹಿಂದಿ , ತೆಲುಗು , ತಮಿಳಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಜೂ 1 ರಂದು ಚಿತ್ರತಂಡವು ದೆಹಲಿಯಲ್ಲಿ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಲಾಗಿದೆ. ಈ ವಿಶೇಷ ಪ್ರದರ್ಶನಕ್ಕೆ ಕೇಂದ್ರ ಹಲವು ಮಂತ್ರಿಗಳನ್ನು ಮತ್ತು ಸಂಸದರನ್ನು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ಆಹ್ವಾನಿಸಲಾಗಿದ್ದು, ಆಗ ಅಮಿತ್ ಶಾ ಅವರು ಕೂಡ ಈ ಸಿನಿಮಾವನ್ನು ವೀಕ್ಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd