ಪಿಎಸ್ಐ ಅಕ್ರಮ ನೇಮಕಾತಿ  – ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ 50 ಜನರಿಗೆ ನೋಟಿಸ್

1 min read

ಪಿಎಸ್ಐ ಅಕ್ರಮ ನೇಮಕಾತಿ  – ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ 50 ಜನರಿಗೆ ನೋಟಿಸ್

ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದ  ಬೆನ್ನು ಹತ್ತಿರುವ ಸಿಐಡಿ  ಅಧಿಕಾರಿಗಳು ದೊಡ್ಡ ದೊಡ್ಡ ರಹಸ್ಯಗಳನ್ನೇ ಬೇಧಿಸುತ್ತಿದೆ. ಈಗಾಗಲೇ ಬಂಧಿತರಿಂದ ಸ್ಥಳ ಪರಿಶೀಲನೆ ಮತ್ತು ಮಾಹಿತಿ ಕಲೆ ಹಾಕುತ್ತಿದ್ದಾರೆ.  ಕಲ್ಬುರ್ಗಿ ಮಾತ್ರವಲ್ಲೇ ರಾಜ್ಯದ ಉದ್ದಗಲಕ್ಕೂ ಅಕ್ರಮ ನಡದಿರುವ ಶಂಕೆ ವ್ಯಕ್ತವಾಗಿದೆ.   ಇನ್ನೊಂದೆಡೆ ಈಗಾಗಲೇ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ 50 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಏ.20ರಂದು ಅಂದರೆ ಇಂದು ಬೆಳಗ್ಗೆ 10 ಗಂಟೆಯಿಂದ ಬೆಂಗಳೂರಿನ ಸಿಐಡಿ ಮುಖ್ಯ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಅಲ್ಲದೆ ಖುದ್ದಾಗಿ ಹಾಜರಾಗುವಂತೆ ಎಲ್ಲ 50 ಅಭ್ಯರ್ಥಿಗಳಿಗೆ ತಿಳಿವಳಿಕೆ ನೀಡಲಾಗಿದೆ. ವಿಚಾರಣೆಗೆ ಬರುವಾಗ ಹಾಲ್‌ ಟಿಕೆಟ್‌ನ ಅಸಲಿ ಪ್ರತಿ ಹಾಗೂ ಪರೀಕ್ಷೆಯ ಒಎಂಆರ್‌ ಶೀಟ್‌ನ ಕಾರ್ಬನ್‌ ಪ್ರತಿ ತರುವಂತೆ ಸೂಚಿಸಲಾಗಿದೆ.

ನೋಟಿಸ್‌  ಪಡೆದುಕೊಂಡಿರುವ ಅಭ್ಯರ್ಥಿಗಳು 2021 ಅ.3ರಂದು ನಡೆದ ಪಿಎಸ್ ಐ ನೇಮಕಾತಿ ಪರೀಕ್ಷೆಯ ಅಸಲು ಪ್ರತಿ ಹಾಗೂ 2ನೇ ಪತ್ರಿಕೆಯ ಪರೀಕ್ಷೆಯ ದಿನ ತೆಗೆದುಕೊಂಡಿರುವ ಓಎಂಆರ್‌ ಶೀಟ್‌ನ ಕಾರ್ಬನ್‌ ಪ್ರತಿಯ ಅಸಲು ದಾಖಲೆಯನ್ನು ವಿಚಾರಣೆಗೆ ಹಾಜರಾಗುವ ವೇಳೆ ತರುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಮತ್ತೊಂದೆಡೆ ಸಿಐಡಿ ವಶದಲ್ಲಿರುವ 6 ಅಭ್ಯರ್ಥಿಗಳ  ವಶದ ಅವಧಿ ಮುಕ್ತಾಯಗೊಳ್ಳಲಿದೆ ಹಾಗಾಗಿ  ಸಿ ಐ ಡಿ ಅಧಿಕಾರಿಗಳು ಅವರನ್ನ ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. 3 ಅಭ್ಯರ್ಥಿಗಳು ಮತ್ತು 3 ಕೊಠಡಿ ಮೇಲ್ವಿಚಾರಕರು ಸೇರಿ ಬಂಧಿತ 6 ಜನರನ್ನ  ನ್ಯಾಯಲಯ 3 ದಿನಗಳ ಕಾಲ ಕೋರ್ಟ್ ವಶಕ್ಕೆ ನೀಡಿತ್ತು.

psi-illegal-appointment-notice-to-50-people-on-temporary-selection-list

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd