PSI ಅಕ್ರಮ ನೇಮಕಾತಿ | ಮತ್ತೊಬ್ಬ ಪ್ರಮುಖ ಆರೋಪಿ ಸಿಐಡಿಗೆ ಶರಣಾಗತಿ
ಕಲಬುರಗಿ: PSI ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಜ್ಞಾನಜ್ಯೋತಿ ಕಾಲೇಜಿನ ಹೆಡ್ ಮಾಸ್ಟರ್ ಕಾಶಿನಾಥ್ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಇಂದು (ಸೋಮವಾರ) ತಾನಾಗಿಯೇ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಈತ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಶಿನಾಥ್ ನಾಪತ್ತೆಯಾಗಿದ್ದ. ಈತನಿಗಾಗಿ ಸಿಐಡಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದು, ಇಂದು ತಾನಾಗಿಯೇ ಸಿಐಡಿ ಕಚೇರಿಗೆ ಬಂದಿದ್ದಾನೆ.
ಈ ಪ್ರಕರಣದ ಪ್ರಮುಖ ಆರೋಪಿಗಳಾದ ರುದ್ರಗೌಡ ಪಾಟೀಲ್. ನೀರಾವರಿ ಇಲಾಖೆಯ ಎಇ ಮಂಜುನಾಥ ಮೆಳಗುಂದಿ ಜತೆ ಕಾಶಿನಾಥ ಸಂಪರ್ಕ ಹೊಂದಿದ್ದನು. ಅಕ್ರಮ ನಡೆಸಲು ಸಹಕರಿಸುವಂತೆ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ. ಬಳಿಕ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಏಪ್ರಿಲ್ 10 ರಂದು ನಾಪತ್ತೆಯಾಗಿದ್ದ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿವರೆಗೆ 26 ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಕ್ವೀನ್ ಪಿಂಗ್ ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಕಿಂಗ್ ಪಿನ್ ಗಳು ಒಬ್ಬಬ್ಬರಾಗಿ ಶರಣಾಗುತ್ತಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಆಯ್ಕೆಯಾದ 172 ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್, ಒಎಮ್ ಆರ್ ಹಾಜರುಪಡಿಸಲು ಸಿಐಡಿ ನೋಟಿಸ್ ನೀಡಿತ್ತು.
ಅಭ್ಯರ್ಥಿಗಳು ಏಪ್ರಿಲ್ 20, 21, 22 ರಂದು ವಿಚಾರಣೆಗೆ ಹಾಜರಾಗಿದ್ದರು. 172 ಅಭ್ಯರ್ಥಿಗಳ ಪೈಕಿ 4 ಅಭ್ಯರ್ಥಿ ಕಾರ್ಬನ್ ಕಾಪಿ ಹಾಜರು ಪಡಿಸಿಲ್ಲ. 168 ಅಭ್ಯರ್ಥಿಗಳು ಕಾರ್ಬನ್ ಕಾಫಿ ಸಿಐಡಡಿಗೆ ಹಾಜರು ಪಡಿಸಿದ್ದರು.









