PSI ಅಕ್ರಮ ನೇಮಕಾತಿ | ತಪ್ಪಿತಸ್ಥರಿಗೆ ಆರಗ ಜ್ಞಾನೇಂದ್ರ ಎಚ್ಚರಿಕೆ
ಕಲಬುರಗಿ: PSI ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತಾಡೋಕೆ ಅವರಿಗೆ ವಾಕ್ ಸ್ವಾತಂತ್ರ ಇದೆ ಮಾತಾಡಲಿ. ದಾಖಲಾತಿ ಕೊಡಿ ಅಂದ್ರೆ ಕಾಂಗ್ರೆಸ್ ಅವರು ಓಡಿಹೋಗುತ್ತಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಟಾಂಗ್ ಕೊಟ್ಟರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟ ಅವರು ಸಿದ್ದರಾಮಯ್ಯ 300 ಕೋಟಿ ಅಲ್ಲ 3000 ಕೋಟಿ ಆರೋಪ ಮಾಡಲಿ. ಈ ಕೇಸಲ್ಲಿ ಬಹುತೇಕ ಸಿಲುಕಿದವರೇ ಕಾಂಗ್ರೆಸ್ ನವರು. ತನಿಖೆಯ ದಿಕ್ಕನ್ನ ಕಾಂಗ್ರೆಸ್ ನವರು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.
ಇನ್ನೂ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಬಾರದು.ತನಿಖೆಯನ್ನ ಹೇಗೆ ಮಾಡುತ್ತಿದ್ದೀವಿ ಗೊತ್ತಾ ? ಈ ಸ್ಯ್ಕಾಮನಲ್ಲಿ ಕೈ ಹಾಕಿದೊರು ಇನ್ನೊಮ್ಮೆ ಮುಟ್ಟಿ ನೊಡ್ಕೊಬೇಕು ಎಂದು ಎಚ್ಚರಿಕೆ ನೀಡಿದರು.