PSI ನೇಮಕಾತಿ ಅಕ್ರಮ | ಮತ್ತೊಬ್ಬ ಆರೋಪಿಯ ಬಂಧನ
ಹಾಸನ: PSI ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯತಿಯ ಅಧ್ಯಕ್ಷ ಕೇಶವಮೂರ್ತಿಯನ್ನು CID ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣ ತನಿಖೆಯನ್ನು ಚುರುಕುಗೊಳಿಸಿರುವ CID ಅಧಿಕಾರಿಗಳು, ಕೇಶವಮೂರ್ತಿಯನ್ನು ವಿಚಾರಣಗೆ ಕರಸಿ ಬಂಧಿಸಿದ್ದಾರೆ. ಹಾಗೇ ಪರಾರಿಯಾಗಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಗಾಗಿ CID ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ಪ್ರಕರಣದ ಜಾಡು ಹಾಸನಕ್ಕೂ ಹಬ್ಬಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತಗುತ್ತಿದೆ.
ಇನ್ನೂ CID ಅಧಿಕಾರಿಗಳು ಜಿಲ್ಲೆಯಲ್ಲಿ ಹಲವರನ್ನು ಬಂಧಿಸಿದ್ದು, PSI ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ವೆಂಕಟೇಶ ಎಂಬುವನನ್ನು ವಶಕ್ಕೆ ಪಡೆದಿದ್ದಾರೆ. ವೆಂಕಟೇಶ ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಚಂದ್ರಶೇಖರನ ಪುತ್ರ. ಚಂದ್ರಶೇಖರ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿಯ ಆಪ್ತ. ಕೇಶವಮೂರ್ತಿ ಮೂಲಕ PSI ನೇಮಕಾತಿಯಲ್ಲಿ ಡೀಲ್ ಮಾಡಿ ಪುತ್ರನ ಆಯ್ಕೆ ಮಾಡಿಸಿರುವ ಆರೋಪದಡಿ ವೆಂಕಟೇಶನನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ ಪ್ರಕರಣದ ಪ್ರಮುಖ ಆರೋಪಿ ರುದ್ರಗೌಡ ಪಾಟೀಲ್ ಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ. CID ಕಸ್ಟಡಿ ಅಂತ್ಯವಾದ ಹಿನ್ನಲೆ CID ಅಧಿಕಾರಿಗಳು ರುದ್ರಗೌಡ ಪಾಟೀಲ ನನ್ನು ಇಂದು ಜಡ್ಜ ಮುಂದೆ ಹಾಜರುಪಡಿಸಿದ್ದಾರೆ. ಇನ್ನೂ ಪ್ರಕರಣದ ತನಿಖೆಗೆ CID 8 ವಿಶೇಷ ತಂಡಗಳ ರಚನೆಯಾಗಿದೆ.