ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಚಿನ್ನದ ಚಿಗರೆ ಪಿ.ಟಿ. ಉಷಾ ಅವರ ಗುರು ನಂಬಿಯಾರ್ ಸರ್ ನಿಧನ

admin by admin
August 20, 2021
in Newsbeat, Sports, ಕ್ರೀಡೆ
p t usha om nambiyar saakshatv
Share on FacebookShare on TwitterShare on WhatsappShare on Telegram

ಚಿನ್ನದ ಚಿಗರೆ ಪಿ.ಟಿ. ಉಷಾ ಅವರ ಗುರು ನಂಬಿಯಾರ್ ಸರ್ ನಿಧನ

p t usha om nambiyar saakshatvಭಾರತದ ಖ್ಯಾತ ಓಟಗಾರ್ತಿ ಪಿ.ಟಿ. ಉಷಾ ಅವರ ಗುರು ಒ.ಎಂ. ನಂಬಿಯಾರ್ ಅವರು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. 89ರ ಹರೆಯದ ನಂಬಿಯಾರ್ ಅವರಿಗೆ ಹತ್ತು ದಿನಗಳ ಹಿಂದೆ ಹೃದಯಾಘಾತಕ್ಕಿಡಾಗಿದ್ದರು. ಅಲ್ಲದೆ ಅವರಿಗೆ ಪಾರ್ಕಿನ್ ಸನ್ ಕಾಯಿಲೆಯಿಂದ ಕೂಡ ಬಳಲುತ್ತಿದ್ದರು. ನಂಬಿಯಾರ್ ಅವರು ಪತ್ನಿ ಲೀಲಾ, ಹಾಗೂ ಓರ್ವ ಪುತ್ರಿ ಮತ್ತು ಮೂವರು ಪುತ್ರರನ್ನು ಆಗಲಿದ್ದಾರೆ.
ದ್ರೋಣಾಚಾರ್ಯ ಪ್ರಶಸ್ತಿ ಪಡೆದಿದ್ದ ನಂಬಿಯಾರ್, ಈ ವರ್ಷ ಪದ್ಮ ಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು. ಭಾರತೀಯ ವಾಯು ಸೇನೆಯ ಮಾಜಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ನಂಬಿಯಾರ್ ಅವರು ಪಿ. ಟಿ. ಉಷಾ ಅವರನ್ನು ಚಿನ್ನದ ಚಿಗರೆಯಂತೆ ಓಡಲು ತರಬೇತಿ ನೀಡಿದ್ದರು. ಜೊತೆಗೆ ನೂರಾರು ಕ್ರೀಡಾಪಟುಗಳಿಗೂ ತರಬೇತಿ ನೀಡಿದ್ದರು.
ಗುರುವಿನ ನಿಧನಕ್ಕೆ ಪಿ. ಟಿ. ಉಷಾ ಅವರು ಸಂತಾಪ ಸೂಚಿಸಿದ್ದಾರೆ. ನನಗೆ ನಂಬಿಯಾರ್ ಸರ್ ಅವರು ತಂದೆಯ ಸಮಾನರಾಗಿದ್ದರು. ಅವರ ಸಲಹೆ, ಮಾರ್ಗದರ್ಶನ, ಬೆಂಬಲವಿರದೇ ಇರುತ್ತಿದ್ರೆ ನಾನು ಯಾವುದೇ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ನೆರಳಿನ ಹಿಂದೆ ಹೆಜ್ಜೆಯನ್ನಿಟ್ಟುಕೊಂಡು ಬೆಳೆದವಳು ನಾನು. ಹೀಗಾಗಿಯೇ ನಾನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಯ್ತು. ಅವರ ನಿಧನ ನನಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಪಿ.ಟಿ. ಉಷಾ ಹೇಳಿದ್ದಾರೆ.
p t usha om nambiyar saakshatv1977ರಲ್ಲಿ ಕಣ್ಣೂರಿನಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್ ನಲ್ಲಿ ನಂಬಿಯಾರ್ ಅವರ ಕಣ್ಣಿಗೆ ಬಿದ್ದಿದ್ದ ಪಿ.ಟಿ. ಉಷಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಅವರ ತರಬೇತಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಪಿ.ಟಿ. ಉಷಾ ಅವರು ಭಾರತದ ಅದ್ಭುತ ಓಟಗಾರ್ತಿಯಾಗಿ ರೂಪುಗೊಂಡಿದ್ದರು.
13 ವರ್ಷಗಳ ಕಾಲ ಅಂದ್ರೆ 1977ರಿಂದ 1990ರ ವರೆಗೆ ಪಿ.ಟಿ. ಉಷಾ ಅವರಿಗೆ ತರಬೇತಿ ನೀಡಿದ್ದ ನಂಬಿಯಾರ್, 1984ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಪದಕ ಕೈ ತಪ್ಪಿದಾಗ ಕೋಚ್ ಅನ್ನೋದನ್ನು ಮರೆತು ನಂಬಿಯಾರ್ ಕಣ್ಣೀರು ಹಾಕಿದ್ದರು. ಶಿಷ್ಯೆ ಅದ್ಭುತವಾಗಿ ಓಡಿದ್ರೂ ಒಲಿಂಪಿಕ್ಸ್ ಪದಕ ಸಿಕ್ಕಿಲ್ಲ ನೋವು ಅವರಿಗಿತ್ತು. 100 ಮೀಟರ್, 200 ಮೀಟರ್, 400 ಮೀಟರ್ ಮತ್ತು 400 ಮೀಟರ್ ಹರ್ಡಲ್ಸ್ ನಲ್ಲಿ ಪಿ. ಟಿ. ಉಷಾ ಅವರು ಏಷ್ಯಾ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದರು. ಈ ಸಾಧನೆಗಳ ಹಿಂದೆ ನಂಬಿಯಾರ್ ಅವರ ತರಬೇತಿ, ಮಾರ್ಗದರ್ಶನ ಮತ್ತು ಸಲಹೆಗಳು ಇದ್ದವು. ಇದನ್ನೆಲ್ಲಾ ಪಿ. ಟಿ. ಉಷಾ ಅವರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
ಗುರು ವಿನ ಆರೋಗ್ಯವನ್ನು ಆಗಾರ ವಿಚಾರಿಸಿಕೊಳ್ಳುತ್ತಿದ್ದ ಪಿ.ಟಿ. ಉಷಾ ಅವರು ಇತ್ತೀಚೆಗೆ ನಂಬಿಯಾರ್ ಅವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು. ಆಗ ನೀರಜ್ ಚೋಪ್ರಾ ಅವರು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವುದನ್ನು ಗುರುವಿನ ಬಳಿ ಹೇಳಿದ್ದರು. ಆದ್ರೆ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ರೆ ಆರ್ಥವಾಗುತ್ತಿತ್ತು ಎಂದು ಪಿ. ಟಿ. ಉಷಾ ಹೇಳಿದ್ದಾರೆ. \

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026
Tags: indiakarnatakakeralakocchiom nambiyarP.T. UshaSports
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram