ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದ ಬಂದ್ ಆಗಿದ್ದ ಪದವಿ ಕಾಲೇಜುಗಳು ಇದೇ ನವೆಂಬರ್ 17ರಿಂದ ಆರಂಭವಾಗಲಿದೆ. ಆದರೆ ಪಿಯು ಕಾಲೇಜು ಸದ್ಯಕ್ಕೆ ಆರಂಭ ಇಲ್ಲ ಎಂದು ಹೇಳಲಾಗುತ್ತಿದೆ.
ಕಾಲೇಜು ಆರಂಭ ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣದಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಕಾಲೇಜು ಪ್ರಾರಂಭ ಮಾಡುವುದಾಗಿ ನಿರ್ಣಯಿಸಲಾಗಿದೆ.
ನವೆಂಬರ್ 17 ರಿಂದ ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜು ಪ್ರಾರಂಭ ಮಾಡವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದ್ರೆ ಈ ಸಭೆಯಲ್ಲಿ ಪಿಯು ಕಾಲೇಜು ಆರಂಭದ ಕುರಿತು ಯಾವುದೇ ಚರ್ಚೆ ಆಗಿಲ್ಲ.
ನವೆಂಬರ್ 17 ರಿಂದ ಎಂಜಿನಿಯರಿಂಗ್, ಡಿಪ್ಲೊಮಾ, ಪದವಿ ಕಾಲೇಜು ಪ್ರಾರಂಭ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಭೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ಪ್ರತಿ ವಿದ್ಯಾರ್ಥಿಗೂ ಉಷ್ಣಾಂಶ ಚೆಕ್ ಮಾಡುವ ಬಗ್ಗೆಯೂ ತೀರ್ಮಾನಿಸಲಾಯಿತು.
ಈ ಎಲ್ಲ ಚರ್ಚೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥನಾರಾಯಣ, ನವೆಂಬರ್ 17ರಂದು ಕಾಲೇಜು ಆರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ತರಗತಿ ಬರುವುದು ಕಡ್ಡಾಯವಲ್ಲ.
ಪೋಷಕರ ಅನುಮತಿ ಮೇರೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು. ಕಾಲೇಜಿಗೆ ಬರುವುದು-ಬಿಡುವುದು ವಿದ್ಯಾರ್ಥಿಗಳ ಆಯ್ಕೆ. ಆನ್‍ಲೈನ್ ಮುಖಾಂತರ ಬೇಕಾದರೂ ಕ್ಲಾಸ್ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.









