ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ -ಭಾರತ ಸೈನಿಕರ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾದ ಹಿನ್ನೆಲೆ ದೇಶದಲ್ಲಿ ಚೀನಾ ವಸ್ತುಗಳ ಬಹಿಷ್ಕಾರದ ಅಭಿಯಾನ ಆರಂಭವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ ಕಟ್ ಚೀನಾ ಅಭಿಯಾನ ಜೋರಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಮೊನ್ನೆ ಚೀನಾದ 59 ಆಪ್ ಗಳನ್ನು ಬ್ಯಾನ್ ಮಾಡಿ ಆದೇಶ ನೀಡಿದೆ.
ಹೀಗಾಗಿ ಜನರು ಚೀನಾ ಆಪ್ ಗಳಿಗೆ ಪರ್ಯಾಯ ಆಪ್ ಗಳನ್ನು ಹುಡುಕುತ್ತಿದ್ದಾರೆ. ಅದರ ಭಾಗವಾಗಿ ಇದೀಗ ಟಿಕ್ ಟಾಕ್ ಆಪ್ ಗೆ ಪರ್ಯಾಯವಾಗಿ ಚಿಂಗಾರಿ, ಶೇರ್ ಇಟ್ ಗೆ ಪರ್ಯಾಯವಾಗಿ ಝಡ್ ಶೇರ್ ಆಪ್ ಗಳು ದೊರಕಿವೆ.
ಇದರ ಮಧ್ಯೆ ಭಾರತದಲ್ಲಿ ಟಿಕ್ ಟಾಕ್ ನಷ್ಟೇ ಜನ ಪ್ರಿಯವಾಗಿರುವ ಪಬ್ ಜಿ ಬಗ್ಗೆ ಜನರು ತಲೆಕೆಡಿಸಿಕೊಂಡಿದ್ದಾರೆ. ಚೀನೀ ಆಪ್ ಗಳನ್ನು ಸರ್ಕಾರ ಬ್ಯಾನ್ ಮಾಡಿದ್ದು, ಸರಿ. ಆದ್ರೆ ಪಬ್ ಜಿ ಮಾತ್ರ ಇನ್ನೂ ಯಾಕೆ ಭಾರತದಲ್ಲಿ ನಿಷೇಧವಾಗಿಲ್ಲ..? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇದೀಗ ಈ ಎಲ್ಲವುದಕ್ಕೂ ಉತ್ತರ ಸಿಕ್ಕಿದೆ.
“ಪಬ್ ಜಿ ಸಂಪೂರ್ಣವಾಗಿ ಚೀನಾ ಆಪ್ ಅಲ್ಲ. ಬದಲಾಗಿ ಇದನ್ನು ದಕ್ಷಿಣ ಕೊರಿಯಾದ ಬ್ಲೂ ಹೋಲ್ ಎಂಬ ಕಂಪನಿ ರಚಿಸಿ ನಿರ್ವಹಿಸುತ್ತಿತ್ತು. ಆದ್ರೆ ಇದರ ಜನಪ್ರಿಯತೆ ಕಂಡ ಚೀನಾ ಬ್ಲೂ ಹೋಲ್ ಜೊತೆ ಕೈ ಜೋಡಿಸಿತು. ಅನಂತರ ಪಬ್ ಜಿಯ ಹೆಚ್ಚಿನ ನಿರ್ವಹಣೆಯನ್ನು ಚೀನಾವೇ ವಹಿಸಿಕೊಂಡಿತು. ಹೀಗಾಗಿ ಸದ್ಯ ಪಬ್ ಜಿ ಜಂಟಿ ಮಾಲೀಕತ್ವದಲ್ಲಿ ಇರೋದ್ರಿಂದ ಭಾರತ ಸರ್ಕಾರ ಇದನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿಲ್ಲ”.