ಪಬ್ ಜೀ ಆಡಲು ಮನೆಯಿಂದ ಹೊರ ಹೋದ 12 ರ ಬಾಲಕನ ಬರ್ಬರ ಹತ್ಯೆ..!

1 min read

ಪಬ್ ಜೀ ಆಡಲು ಮನೆಯಿಂದ ಹೊರ ಹೋದ 12 ರ ಬಾಲಕನ ಬರ್ಬರ ಹತ್ಯೆ..!

ಮಂಗಳೂರು: 12 ವರ್ಷದ ಬಾಲಕನೊಬ್ಬ ಪಬ್ ಜೀ ಆಟ ಆಡಲು ಸ್ನೇಹಿತರೊಂದಿಗೆ ಮನೆಯಿಂದ ಹೊರ ಹೋಗಿದ್ದ. ಆದ್ರೆ ಮೈದಾನದಲ್ಲಿಯೇ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಇಂತಹದೊಂದು ಆಘಾತಕಾರಿ ಘಟನೆ ಮಂಗಳೂರು ಹೊರವಲಯದ ಕೆಸಿ ರಸ್ತೆ ಬಳಿ ನಡೆದಿದೆ.  ಈ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ಧಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆ ರವಾನೆ ಮಾಡಿದ್ದಾರೆ.

ಶನಿವಾರ ಸಂಜೆ ಸ್ನೇಹಿತರು ಕರೆ ಮಾಡಿ ಮನೆ ಪಕ್ಕದ ಗ್ರೌಂಡ್​ ಗೆ  ಪಬ್ ಜೀ ಆಡಲು ಕರೆಸಿಕೊಂಡಿದ್ದಾರೆ. ಬಳಿಕ ಆಕೀಫ್‌ ಗೇಮ್ ಆಡಲು ಹೋಗಿದ್ದಾನೆ. ಬಳಿಕ ಸ್ನೇಹಿತರೊಂದಿಗೆ ಪಬ್ ಜೀ ಆಡುತ್ತಿದ್ದ. ಆದ್ರೆ ರಾತ್ರಿ ವೇಳೆಗೆ ಅನುಮಾನಾಸ್ಪದ ರೀತಿಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಕೊಲೆ ಯಾಕೆ ನಡೆದಿದೆ. ಯಾರು ಕೊಲೆ ಮಾಡಿರಬಹುದು. ಯಾವ ಕಾರಣಕ್ಕೆ ಎಂಬುವುದು ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಹೆಸರುಗಳು ಸಾರಿಗೆ ಇಲಾಖೆ ವೆಬ್ ಸೈಟ್ ಗಳಲ್ಲಿ ಪ್ರಕಟ..!

ಫೇಸ್ ಬುಕ್ ನಿಜವಾಗ್ಲೂ ಎಷ್ಟು ಸೇಫ್..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd