pulvama attack
ಪಾಕಿಸ್ತಾನ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಗೆ ಇಡೀ ದೇಶಕ್ಕೆ ದೇಶವೇ ಬೆಚ್ಚಿಬಿದ್ದುತ್ತು. ಈ ಉಗ್ರ ದಾಳಿಯಲ್ಲಿ ಭಾರತದ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಆ ವೇಳೆ ಇಡೀ ದೇಶದ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಎಲ್ಲರ ರಕ್ತ ಕುದಿಯುತ್ತಿತ್ತು. ಎಲ್ಲರದ್ದೂ ಒಂದೇ ಹಠ ಸೈನಿಕರ ವೀರ ಮರಣಕ್ಕೆ ಪ್ರತಿಯಾಗಿ ಉಗ್ರರ ನೆತ್ತರು ಹರಿಬೇಕಿತ್ತು. ಅದು ನಿಜವೂ ಆಯಿತು. ಅಂದು ಪ್ರಧಾನಿ ಮೋದಿ ಅವರು ಸೇಡು ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಬಾಲಾಕೋಟ್ ಗೆ ನುಗ್ಗಿದ್ದ ಭಾರತೀಯ ವೀರ ಯೋಧರು ಉಗ್ರರ ಅಡಗುತಾಣಗಳನ್ನೇ ಉಡೀಸ್ ಮಾಡಿದ್ರು. ಈ ದಾಳಿಯಲ್ಲಿ ಸುಮಾರು 300 ಉಗ್ರರ ನೆತ್ತರೂ ಹರಿದಿತ್ತು. ಆ ದಿನ ಭಾರತೀಯರು ಹಬ್ಬ ಆಚರಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಆದರೆ ಇಷ್ಟಾದ್ರೂ ಮಾತ್ರ ಪಾಕ್ ತನ್ನ ಹಳೇ ಚಾಳಿ ಬಿಡಲಿಲ್ಲ. ಇಲ್ಲ ಪುಲ್ವಾಮಾ ದಾಳಿ ನಾವು ನಡೆಸಲೇ ಇಲ್ಲ. ಈ ದಾಳಿಗೂ ನಮಗೂ ಸಂಬಂಧವೇ ಇಲ್ಲ ಅಂತ ಪ್ರಪಂಚದ ಮುಂದೆ ಬಾಯಿ ಬಾಯಿ ಬಡೆದುಕೊಮಡಿದ್ದು ಇದೇ ಪಾಕಿಸ್ತಾನ. ಆದ್ರೆ ಇಂದು ಅದೇ ನಾಲಿಗೆಯಲ್ಲೇ ತಪ್ಪೊಪ್ಪಿಕೊಂಡಿರೋದು ಸಹ ಇದೇ ಪಾಕಿಸ್ತಾನ.
ಹೌದು.. ಪುಲ್ವಾಮ ದಾಳಿಗೆ ಪಾಕಿಸ್ತಾನವೇ ಹೊಣೆ ಎಂದು ಪಾಕ್ ಸಚಿವ ತಮ್ಮದೇ ಸಂಸತ್ತಿನಲ್ಲಿ ಒಪ್ಪಿಕೊಂಡಿದ್ದಾರೆ. 2019ರ ಫೆಬ್ರವರಿ 14ರಂದು ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತ ಪ್ಯಾರಾಮಿಲಿಟರಿ ಪಡೆಯ 30 ಸೈನಿಕರು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ ತಮ್ಮ ಪಾತ್ರ ಇರುವುದಾಗಿ ಪಾಕ್ ಸಚಿವ ಒಪ್ಪಿಕೊಂಡಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆಗೆ ತಮ್ಮ ಪ್ರಾಯೋಜಕತ್ವ ಇರುವುದನ್ನು ಸಂಸತ್ತಿನಲ್ಲಿಂದು ಒಪ್ಪಿಕೊಂಡಿದ್ದಾರೆ.
ನಾವು ಭಾರತ ನೆಲದಲ್ಲೇ ಹೊಡೆದೆವು. ಪುಲ್ವಾಮದಲ್ಲಿನ ನಮ್ಮ ಯಶಸ್ಸು, ಪ್ರಧಾನಿ ಇಮ್ರಾನ್ ಖಾನ್ ನಾಯಕತ್ವದ ಅಡಿಯಲ್ಲಿರುವ ಜನರ ಯಶಸ್ಸಾಗಿದೆ. ನಾವು ಮತ್ತು ನೀವು ಎಲ್ಲರೂ ಈ ಯಶಸ್ಸಿನಲ್ಲಿ ಭಾಗಿಯಾಗಿದ್ದೇವೆ ಎಂದು ಪಾಕ್ ನ ಫೆಡರಲ್ ಮಿನಿಸ್ಟರ್ ಫವಾದ್ ಚೌಧುರಿ ಸಂಸತ್ತಿನಲ್ಲೇ ಬಾಯ್ಬಿಟ್ಟಿದ್ದಾರೆ. ಈ ಮೂಲಕ ನಾವು ಮಾಡಿದ ನಾಚಿಕೆಗೇಡಿನ ನೀಚ ಕೃತ್ಯವನ್ನ ಹೊಗಳಿಕೊಂಡು ತಮ್ಮ ಬೆನ್ನನ್ನ ತಾವು ತಟ್ಟಿಕೊಂಡು ಜಗತ್ತಿನ ಮುಂದೆ ಮತ್ತೆ ಮುಖಭಂಗಕ್ಕೆ ಒಳಗಾಗಿದೆ ಪಾಕಿಸ್ತಾನ. ಇದು ಒಂದೇ ಅಲ್ಲ ಪಾಕ್
ಆಗಾಗ ಜಗತ್ತಿನ ಮುಂದೆ ಟೀಕೆಗೆ ಗುರಿಯಾಗುತ್ತಲೇ ಇರುತ್ತೆ. ಈ ಹಿಂದೆ ನಮ್ಮ ವೀರ ಯೋಧರು ಬಾಲಾಕೋಟ್ ನಲ್ಲಿ 300ಕ್ಕೂ ಹೆಚ್ಚು ಉಗ್ರರ ಸಂಹಾರ ಮಾಡಿದ್ದಾಗ. ಒಬ್ಬೇ ಒಬ್ಬ ಉಗ್ರ ಸತ್ತಿಲ್ಲ ಅಂತ ಬಡಾಯಿ ಕೊಚ್ಚಿಕೊಂಡು ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾಗಿದ್ದ ವಿಚಾರವೂ ಯಾರಿಗೂ ಗೊತ್ತಿಲ್ಲದ ವಿಚಾರರವೇನಲ್ಲ.
pulvama attack
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel