ಪುನೀತ್ ಪಿಆರ್ ಕೆ ಬ್ಯಾನರ್ ನ “ಒನ್ ಕಟ್ ಟೂ ಕಟ್” ಟ್ರೈಲರ್ ಬಿಡುಗಡೆ
ಪುನೀತ್ ರಾಜ್ ಕುಮಾರ್ ಅವರ ಹೋಮ್ ಬ್ಯಾನರ್ ಪಿ ಆರ್ ಕೆ ಸ್ಟೂಡಿಯೋಸ್ ಒಡೆತನದಲ್ಲಿ ನಿರ್ಮಾಣವಾಗಿರುವ ದಾನೀಷ್ ಸೇಠ್ ಅಭಿನಯದ ಕಾಮಿಡಿ ಚಿತ್ರ ಒನ್ ಕಟ್ ಟೂ ಕಟ್ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.Puneet PRK Banner’s “One Cut To Cut” trailer released.
ಗೋಪಿ ಎಂಬ ಶಿಕ್ಷಕನ ಪಾತ್ರದಲ್ಲಿ ದಾನೀಷ್ ಸೇಠ್ ಅಭಿನಯಿಸಿದ್ದಾರೆ. ಹೀರೋ ಗೆ ಜೊತೆಯಾಗಿ ಸಂಯುಕ್ತ ಹೊರನಾಡು ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಡಿ ವೀನೀತ್ ಬೀಪ್ ಕುಮಾರ್ ಸಂಪತ್ ಮೈತ್ರೇಯಾ ಇತರರು ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವಂಶಿಧರ್ ಭೋಗರಾಜು ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಗುರುದತ್ ತಲ್ವಾರ್ ನಿರ್ಮಾಣ ಮಾಡಿದ್ದಾರೆ.
ಕಳೆದ ಭಾರಿ ಪ್ರೆಂಚ್ ಬಿರಿಯಾನಿ ನಂತರ ದಾನೀಶ್ ಮತ್ತೆ ಅಮೇಜಾನ್ ಓಟಿಟಿ ಮೂಲಕ ತೆರೆಗೆ ಬರುತ್ತಿದ್ದಾರೆ. ಆರ್ಟ್ಸ್ ಅಂಡ್ ಕ್ರಾಫ್ಟ್ ಶಿಕ್ಷಕನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಕಾಮಿಡಿ ಜೊತೆಗೆ ಶಿಕ್ಷಣದ ಗಂಭೀರತೆಯನ್ನ ಚಿತ್ರ ತೆರದಿಡಲಿದೆ.