ಗೆಳೆಯನನ್ನ ನೋಡಿ ಭಾವುಕರಾದ ಎನ್ ಟಿಆರ್..! Puneet Raj Kumar saaksha tv
ಬೆಂಗಳೂರು : ನಟ ಜ್ಯೂನಿಯರ್ ಎನ್ ಟಿ ಆರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.
ಶುಕ್ರವಾರ ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಕೊನೆಯುಸಿರೆದಿದ್ದರು.
ಅಪ್ಪು ನಿಧನದಿಂದ ಅವರ ಆಪ್ತ ಸ್ನೇಹಿತರಿಗೆ ಆಘಾತವನ್ನು ನೀಡಿದೆ. ಈ ಪೈಕಿ ಪುನೀತ್ ಆಪ್ತ ಸ್ನೇಹಿತರೆಂದೇ ಗುರುತಿಸಿಕೊಂಡಿದ್ದ ನಟ ಜ್ಯೂನಿಯರ್ ಎನ್ ಟಿಆರ್, ಇದೀಗ ಅಪ್ಪು ಅಂತಿಮ ದರ್ಶನ ಪಡೆಸಿದ್ದಾರೆ.
ಗೆಳೆಯನನ್ನು ನೋಡುತ್ತಿದ್ದಂತೆ ಭಾವುಕರಾದ ಎನ್ ಟಿಆರ್, ಶಿವಣ್ಣರನ್ನು ಅಪ್ಪಿಕೊಂಡರು.
ಅಂಹಹಾಗೆ ಪುನೀತ್ ರಾಜ್ ಕುಮಾರ್ ಮತ್ತು ಜ್ಯೂನಿಯರ್ ಎನ್ ಟಿಆರ್ ಇಬ್ಬರೂ ಒಳ್ಳೆ ಸ್ನೇಹಿತರಾಗಿದ್ದರು.
ಜೊತೆಗೆ ಅಪ್ಪು ನಟನೆಯ ಚಕ್ರವ್ಯೂಹ ಸಿನಿಮಾದಲ್ಲಿ ಎನ್ ಟಿಆರ್ ಗೆಳೆಯ ಗೆಳೆಯ ಸಾಂಗ್ ಕೂಡ ಆಡಿದ್ದರು.
ಆದ್ರೆ ಇದೀಗ ಆಪ್ತ ಸ್ನೇಹಿತನನ್ನು ಬಿಟ್ಟು ಅಪ್ಪು ಬಾರದ ಲೋಕಕ್ಕೆ ಪಯಣಿಸಿದ್ದಾರೆ.