ತಮ್ಮನನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಿರುವ ಶಿವಣ್ಣ

1 min read
Puneet Raj kumar saaksha tv

ತಮ್ಮನನ್ನು ನೆನೆದು ಬಿಕ್ಕಿಬಿಕ್ಕಿ ಅಳುತ್ತಿರುವ ಶಿವಣ್ಣ Puneet Raj kumar saaksha tv

ಬೆಂಗಳೂರು : ತಮ್ಮ ಪುನೀತ್ ರಾಜ್ ಕುಮಾರ್ ಪಾರ್ಥಿವ ಶರೀರದ ಮುಂದೆ ಶಿವಣ್ಣ ಚಿಕ್ಕಮಗುವಂತೆ ಅಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು ಶಿವಣ್ಣ ತಮ್ಮ ಕೈಯಾರೇ ಎತ್ತಿ ಮುದ್ದಾಡಿದ್ದರು. ಚಿಕ್ಕಂದಿನಿಂದಲೂ ಪುನೀತ್ ಮೇಲೆ ಶಿವಣ್ಣನಿಗೆ ವಿಶೇಷವಾದ ಕಾಳಜಿ, ಪ್ರೀತಿ ಇತ್ತು. ಪುನೀತ್ ಅವರಿಗೂ ಕೂಡ ಶಿವಣ್ಣನ ಮೇಲೆ ಅದೇ ಪ್ರೀತಿ ಇತ್ತು.

ಆದ್ರೆ ವಿಧಿಯಾಟ ಪುನೀತ್ ರಾಜ್ ಕುಮಾರ್ ಇಂದು ನಮ್ಮೆಲ್ಲರನ್ನು ಬಿಟ್ಟು ಬಾರದಲೋಕಕ್ಕೆ ಪಯಣಿಸಿದ್ದಾರೆ. ಪುನೀತ್ ನಿಧನ ಶಿವಣ್ಣನಿಗೆ ನುಂಗಲಾರದ ತುತ್ತಾಗಿದೆ. ಇನ್ನು ಅಪ್ಪು ನಿಧನದಿಂದ ನೊಂದಿರುವ ಶಿವಣ್ಣ, ಪುನೀತ್ ಪಾರ್ಥಿವ ಶರೀರದ ಮುಂದೆ ಚಿಕ್ಕ ಮಗುವಿನಂತೆ ಕಣ್ಣೀರಾಗಿದ್ದಾರೆ.

Puneet Raj kumar saaksha tv

ಇತ್ತ ಅಪ್ಪು ಅಂತಿಮ ದರ್ಶನ ಪಡೆಯಲು ಬೇರೆ ಸಿನಿಮಾ ಇಂಡಸ್ಟ್ರೀಯ ನಟರು ಕೂಡ ಬರುತ್ತಿದ್ದಾರೆ. ಈಗಾಗಲೇ ನಟ ಬಾಲಕೃಷ್ಣ, ಜ್ಯೂನಿಯರ್ ಎನ್ ಟಿಆರ್, ಪ್ರಭುದೇವ ಕಂಠೀರವ ಸ್ಟೇಡಿಯಂಗೆ ಬಂದು ಅಪ್ಪು ಅಂತಿಮ ದರ್ಶನ ಪಡೆದಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಶಿವರಾಜ್ ಕುಮಾರ್ ಅವರಿಗೆ ಧೈರ್ಯ ತುಂಬಿದ್ದಾರೆ ಹಾಗೂ ರಾಜ್ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd