ಅಪ್ಪು ಆತ್ಮದ ಜೊತೆ ಮಾತಾಡಿದೆ ಎಂದ ಯೂಟ್ಯೂಬರ್ ಗೆ ಫ್ಯಾನ್ಸ್ ಕ್ಲಾಸ್

1 min read
puneeth saaksha tv

ಅಪ್ಪು ಆತ್ಮದ ಜೊತೆ ಮಾತಾಡಿದೆ ಎಂದ ಯೂಟ್ಯೂಬರ್ ಗೆ ಫ್ಯಾನ್ಸ್ ಕ್ಲಾಸ್ puneeth saaksha tv

ಬೆಂಗಳೂರು : ಕನ್ನಡದ ರಾಜರತ್ನ, ಕರುನಾಡ ನಟಸಾರ್ವಭೌಮ ನಟ ಪುನೀತ್ ರಾಜಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 12 ದಿನ.

ಬೆಂಗಳೂರು ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ.

ಈ ಮಧ್ಯೆ ವಿದೇಶಿಗನೊಬ್ಬ ತನ್ನ ಯೂಟ್ಯೂಬ್ ನಲ್ಲಿ ಪುನೀತ್ ಆತ್ಮದ ಜೊತೆ ಮಾತನಾಡಿದ್ದಾಗಿ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾನೆ. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

puneeth saaksha tv

ಹೌದು.. ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಎಂಬಾತ ಪುನೀತ್ ಆತ್ಮದ ಜೊತೆ ಮಾತನಾಡಿದ್ದಾಗಿ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾನೆ.

ವಿಡಿಯೋದಲ್ಲಿ ಚಾರ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾಗಿ ತಿಳಿಸಿದ್ದಾನೆ. ಡಾಕ್ಟರ್.. ಡಾಕ್ಟರ್ ಎಂದೆಲ್ಲ ಅಪ್ಪು ಹೇಳಿರುವುದಾಗಿ ಚಾರ್ಲಿ ಬಿಂಬಿಸಿದ್ದಾನೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಚಾರ್ಲಿ ವಿರುದ್ಧ ಕೆಂಡಕಾರಲಾಂಭಿಸಿದ್ದಾರೆ.

ನಮ್ಮ ಭಾವನೆಗಳ ಜತೆ ಆಟವಾಡಬೇಡಿ.. ಅವರೊಬ್ಬ ಲೆಜೆಂಡ್.. ಈ ರೀತಿ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಜನರನ್ನ ಮೂರ್ಖರನ್ನಾಗಿ ಮಾಡಬೇಡಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ ಕನ್ನಡಿಗರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd