ಕರಗದ ಅಭಿಮಾನ | ಈವರೆಗೂ 6 ಲಕ್ಷ ಮಂದಿಯಿಂದ ಅಂತಿಮ ದರ್ಶನ puneeth saaksha tv
ಬೆಂಗಳೂರು : ಚಂದನವನದ ಪ್ರೀತಿಯ ಅಪ್ಪು ಅಕಾಲಿಕ ನಿಧನ ಇಡೀ ಕರ್ನಾಟಕವನ್ನು ಮೌನವಾಗಿಸಿದೆ. ಪುನೀತ್ ರಾಜಕುಮಾರ್ ಇನ್ನಿಲ್ಲ ಅನ್ನೋ ಸುದ್ದಿ ರಾಜ್ಯದ ಜನತೆಗೆ ಆಘಾತವನ್ನುಂಟು ಮಾಡಿದೆ. ಮಾಧ್ಯಮಗಳ ಮೂಲಕ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನದ ನೇರ ದೃಶ್ಯಗಳನ್ನು ನೋಡುತ್ತಿದ್ದರೂ ನಮ್ಮ ಕಣ್ಣಗಳನ್ನ ನಾವೇ ನಂಬೋಕೆ ಆಗುತ್ತಿಲ್ಲ.
ಪುನೀತ್ ಅಂತಿಮ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು ಬೆಂಗಳೂರಿನತ್ತ ಬರುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಇಂದಿನ ಬೆಳಗಿನವರೆಗೂ ಆರು ಲಕ್ಷಕ್ಕೂ ಹೆಚ್ಚು ಜನರು ಅಪ್ಪು ದರ್ಶನ ಪಡೆದಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ.
ಉತ್ತರ ಕರ್ನಾಟಕ ಭಾಗದಿಂದ ಬಸ್ ಗಳನ್ನು ಮಾಡಿಕೊಂಡು ಅಭಿಮಾನಿಗಳು ಅಪ್ಪು ಅಂತಿಮ ದರ್ಶನ ಪಡೆಯಲು ಬಂದಿದ್ದಾರೆ. ಮಕ್ಕಳು, ಯುವಕರು, ವಯೋವೃದ್ಧರು ಕೂಡ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇನ್ನು ಅಂತಿಮ ದರ್ಶನ ಪಡೆಯುತ್ತಿದ್ದ ಸಂದರ್ಭದಲ್ಲಿ ಕಾಲ್ತುಳಿತದಿಂದ ಮೂವರು ಗಾಯಗೊಂಡಿರುವ ಪ್ರಸಂಗ ಕೂಡ ನಡೆದಿದೆ. ಅದರಲ್ಲೂ ಇಂದೇ ಅಂತಿಮ ಸಂಸ್ಕಾರ ನಡೆಯಲಿದ್ದು, 2.30ವರೆಗೆ ಮಾತ್ರ ಅಂತಿಮ ದರ್ಶನಕ್ಕೆ ಅವಕಾಶ ನೀಡಿದೆ. ಸಮಯ ಕಳೆದಂತೆ ಅಭಿಮಾನಿಗಳು ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪೆÇಲೀಸರು ಮತ್ತಷ್ಟು ಅಲರ್ಟ್ ಆಗುತ್ತಿದ್ದಾರೆ.