ಅನ್ನಾಹಾರ ಬಿಟ್ಟು ಪುನೀತ್ ರಾಜ್ ಕುಮಾರ್ ಅಭಿಮಾನಿ ಸಾವು
ಪುನೀತ್ ರಾಜ್ ಕುಮಾರ್ ನಿಧನದ ಸುದ್ದಿ ಕೇಳ್ತಿದ್ದಂತೆ ಆಘಾತಕ್ಕೆ ಒಳಗಾದ ಅಭಿಮಾನಿ ಅನ್ನಾಹಾರ ಬಿಟ್ಟು ಸಾವನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದಿದೆ. 50 ವರ್ಷದ ಕೆ.ಎಂ ರಾಜೇಶ್ ಮೃತ ಅಭಿಮಾನಿಯಾಗಿದ್ದಾರೆ. ಅಪ್ಪು ನಿಧನದ ಸುದ್ದಿ ಕೇಳ್ತಿದ್ದಂತೆ ಊಟ ತಿಂಡಿ ಬಿಟ್ಟಿದ್ದ ಅಭಿಮಾನಿ ತೀವ್ರ ಅಸ್ವಸ್ಥಗೊಂಡಿದ್ದರು.
ನಿನ್ನೆ ಅಪ್ಪು ಅಂತಿಮ ದರ್ಶನಕ್ಕೆ ಹೋಗಲು ಮನೆಯಿಂದ ತೆರಳಿದ್ದವರು ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದಾರೆ. ಬಳಿಕ ಸಂಜೆ ಯಾರೋ ಪರಿಚಯಸ್ಥರು ಅವರನ್ನ ನೋಡಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಮನೆಯವರು ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಮಧ್ಯ ರಾತ್ರಿ 12 ಗಂಟೆಗೆ ಅವರು ಸಾವನಪ್ಪಿದ್ಧಾರೆ.
ಇವರು ರಾಜ್ ಕುಮಾರ್ ಅವರ ಕುಟುಂಬದ ದೊಡ್ಡ ಅಭಿಮಾನಿ.. ರಾಜ್ ಕುಮಾರ್ ಎಂಬ ಹೆಸರಿನಲ್ಲೇ ಹೋಟೆಲ್ ಒಂದನ್ನ ನಡೆಸ್ತಾಯಿದ್ದರು. ಮೊನ್ನೆ ಚಾಮರಾಜನಗರದಲ್ಲಿ ಒಬ್ಬ ಅಭಿಮಾನಿ ಅಪ್ಪು ಸಾವಿನ ಆಘಾತದಿಂದ ಹೃದಯಾಘಾತದಿಂದ ಸಾವನಪ್ಪಿದ್ದರು. ನಿನ್ನೆ ಮಂಡ್ಯದಲ್ಲಿ ಇಬ್ಬರು ಅಪ್ಪು ಅಭಿಮಾನಿಗಳು ಮೃತಪಟ್ಟಿದ್ದರು. ಅಲ್ಲದೇ ಪ್ರತ್ಯೇಕ ಕಡೆಗಳಲ್ಲಿ ಕನಿಷ್ಠ ಮೂವರು ಆತ್ಮಹತ್ಯೆಗೆ ಶರಣಾಗಿದ್ದರು.








