ಮರೆಯಾದ ಕನ್ನಡದ ರಾಜರತ್ನ ಪುನೀತ್`’ puneeth raj saaksha tv
ಕೋಟ್ಯಾಂತರ ಅಭಿಮಾನಿ ದೇವರುಗಳ ಪ್ರಾರ್ಥನೆ ಫಲಿಸಲೇ ಇಲ್ಲ.. ಇದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕರಾಳ ದಿನ.. ಕನ್ನಡದ ಸಿನಿಮಾ ಪ್ರಪಂಚ ಇಂದು ಮೂಖವಾಗಿದೆ.
ಕನ್ನಡದ ರಾಜರತ್ನ ನಟ ಪುನೀತ್ ರಾಜ್ ಕುಮಾರ್ ಇಂದು ನಮ್ಮೆಲ್ಲರನ್ನೂ ಅಗಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಸಣ್ಣವಯಸ್ಸಿನಲ್ಲೇ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟು ರಾಷ್ಟ್ರ ಪ್ರಶಸ್ತಿ ಗೆ ಮುತ್ತಿಟ್ಟಿದ್ದ ಅಪ್ಪು, ಬಳಿಕ ರಾಜಕುಮಾರನಾಗಿ ಕನ್ನಡ ಚಿತ್ರರಂಗವನ್ನಾಳಿದರು.
ಸದಾ ಲವಲವಿಕೆಯಿಂದ ಜನರೊಂದಿಗೆ ಬೆರೆಯುತ್ತಿದ್ದ ಸರಳತೆಯ ಸಾಹುಕಾರ ಇಹಲೋಕ ತ್ಯಜಿಸಿರೋದು ಕನ್ನಡಗರಿಗೆ ದಿಗ್ಭ್ರಾಂತಿಯನ್ನುಂಟು ಮಾಡಿದೆ.
ಬೆಟ್ಟದ ಹೂವು ಸಿನಿಮಾದಲ್ಲಿ ಬಾಲ ನಟರಾಗಿ ಬಣ್ಣದ ಬದುಕಿಗೆ ಬಂದ ಪುನೀತ್ ರಾಜ್ ಕುಮಾರ್, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು ಸಿನಿಮಾದಲ್ಲಿ ನಟಿಸಿದ್ದರು.
ಬಳಿಕ ಪೂರ್ಣಮಟ್ಟದ ನಾಯಕನಾಗಿ ಅಪ್ಪು ಸಿನಿಮಾ ಮೂಲಕ ಎಂಟ್ರಿಕೊಟ್ಟ ಪುನೀತ್, ಅಭಿ, ಮೌರ್ಯ, ವೀರಕನ್ನಡಿಗ, ಆಕಾಶ್, ಅರಸು ಸಿನಿಮಾಗಳಲ್ಲಿ ನಟಿಸಿ ಜನಮನಗೆದ್ದಿದ್ದರು.
ಇದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಪುನೀತ್, 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಈ ವರ್ಷ ಯುವರತ್ನರಾಗಿ ಥಿಯೇಟರ್ ಅಂಗಳಕ್ಕೆ ಬಂದಿದ್ದ ಅಪ್ಪು, ಜೇಮ್ಸ್ ಸೇರಿದಂತೆ ಇನ್ನು ಕೆಲ ಸಿನಿಮಾಗಳಿಗೆ ಸಹಿ ಹಾಕಿದ್ದರು.
ಇನ್ನು ಕನ್ನಡದ ರಾಜರತ್ನನ ಸಾವಿಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ.