ತಮಿಳುನಾಡಿನ ವಿಧಾನಸಭೆಯಲ್ಲಿ ಅಪ್ಪುಗೆ ಗೌರವ ಸಮರ್ಪಣೆ
ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್ ಸ್ಯಾಂಡಲ್ ವುಡ್ ನ ‘ಯುವರತ್ನ’ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸಲಾಗಿದೆ.. ಪುನೀತ್ ರಾಜ್ ಕುಮಾರ್ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ.. ಅಪ್ಪು ಅಗಲಿಕೆಯ ನೋವು ಕರ್ನಾಟಕದಲ್ಲಿ ಮಾತ್ರವೇ ಅಲ್ಲ , ತೆಲಂಗಾಣ , ಆಂಧ್ರಪ್ರದೇಶ ತಮಿಳುನಾಡು ಮಂದಿಗೂ ಇದೆ..
ಇಂದು ತಮಿಳುನಾಡಿನ ವಿಧಾನಸಭೆ ಅಧಿವೇಶನ ಆರಂಭವಾಗಿದೆ.. ಆದ್ರೆ ಅಧಿವೇಶನ ಆರಂಭಕ್ಕೂ ಮುನ್ನ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು.. ಅಂತೆಯೇ ನಟ ಪುನೀತ್ ರಾಜ್ ಕುಮಾರ್ ಅವರಿಗೆ ವಿಧಾನಸಭೆಯಲ್ಲಿ ಗೌರವ ಸಲ್ಲಿಸಲಾಯಿತು..
ರಾಜ್ಯಪಾಲರ ಭಾಷಣಕ್ಕು ಮುನ್ನ ಅಪ್ಪು ಅವರಿಗೆ ತಮಿಳುನಾಡಿನ ವಿಧಾನಸಭಾ ಸದಸ್ಯರು ಸಾಮೂಹಿಕವಾಗಿ ಗೌರವ ಸಮರ್ಪಿಸಿದರು..








