ಬೆಂಗಳೂರಿನತ್ತ ಅಪ್ಪು ಅಭಿಮಾನಿಗಳು | ಇಂದು ದಿನವಿಡೀ ಅಂತಿಮ ದರ್ಶನ

1 min read
Puneet Rajkumar's saaksha tv

ಬೆಂಗಳೂರಿನತ್ತ ಅಪ್ಪು ಅಭಿಮಾನಿಗಳು | ಇಂದು ದಿನವಿಡೀ ಅಂತಿಮ ದರ್ಶನ

ಬೆಂಗಳೂರು : ಕನ್ನಡದ ರಾಜರತ್ನ, ನಟ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿನ್ನೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪ್ರೀತಿಯ ಅಪ್ಪು ನಿಧನಕ್ಕೆ ಸ್ಟಾರ್ ನಟರು, ರಾಜಕೀಯ ಮುಖಂಡರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಶುಕ್ರವಾರ ಕರ್ನಾಟಕದ ಜನತೆಗೆ ಸಿಡಿಲು ಬಡಿದಂತೆ ಬಡಿಯಿತು. ಈ ಸುದ್ದಿ ಇಡೀ ಕರ್ನಾಟಕವನ್ನು ಕಣ್ಣೀರ ಕಡಲಿಗೆ ನೂಕಿತು. ಸಾಕಷ್ಟು ಅಭಿಮಾನಿಗಳು ನಿಂತಲ್ಲಿಯೇ ಕುಸಿದುಬಿದ್ದರು.

ಇನ್ನು ಅಪ್ಪು ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬೆಂಗಳೂರಿನತ್ತ ಜನ ಸಾಗರವೇ ಹರಿದುಬರುತ್ತಿದೆ. ಹೀಗಾಗಿ ಇಂದು ದಿನ ಪೂರ್ತಿ ಅಪ್ಪು ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

puneeth-rajkuar saaksha tv

ಸದ್ಯ ಕಂಠೀರವ ಸ್ಟೇಡಿಯಂ ಬಳಿ ಲಕ್ಷಾಂತರ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದಾರೆ. ಇದಲ್ಲದೇ ಬೇರೆ ರಾಜ್ಯದ ಜನರು ಕೂಡ ಇಂದು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ.

ಇತ್ತ ಇಂದು ಕೂಡ ಅಂತಿಮ ದರ್ಶನಕ್ಕೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಯಾವುದೇ ರೀತಿಯ ಲೋಪದೋಷ ಹಾಗೂ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಹೀಗಾಗಿ ಇಡೀ ನಗರದಲ್ಲಿ ಪೆÇಲೀಸ್ ಸರ್ಪಗಾವಲು ಹಾಕಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd