ನವೆಂಬರ್ 16ಕ್ಕೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಪ್ಪುಗೆ ನುಡಿ ನಮನ – ಒಟ್ಟಾಗಲಿದೆ ಇಡೀ ಚಿತ್ರರಂಗ

1 min read
Puneeth Rajkumar

ನವೆಂಬರ್ 16ಕ್ಕೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಪ್ಪುಗೆ ನುಡಿ ನಮನ – ಒಟ್ಟಾಗಲಿದೆ ಇಡೀ ಚಿತ್ರರಂಗ

ಬೆಂಗಳೂರು :  ಕೋಟ್ಯಾಂತರ ಕರುನಾಡಿಗರನ್ನ ಅಗಲಿರುವ ದೊಡ್ಮನೆ ಹುಡುಗ ಅಪ್ಪುಗೆ  ಸ್ಯಾಂಡಲ್ ವುಡ್ ಬೃಹತ್ ನುಡಿನಮನದ ಮೂಲಕ ಗೌರವ ಸಲ್ಲಿಸಲು ಸಿದ್ಧತೆ  ಮಾಡಿಕೊಂಡಿದೆ. ನವೆಂಬರ್ 16ರಂದು ಅರಮನೆ ಮೈದಾನದ ಒಳಾಂಗಣ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಇಡೀ ಚಿತ್ರರಂಗವೇ ಒಂದಾಗಲಿದೆ. ಟಾಲಿವುಡ್ , ಕಾಲಿವುಡ್ , ಮಾಲಿವುಡ್ ನಿಂದಲೂ ತಾರೆಯರು ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಸಿಎಂ ಬಹಳ ಖುಷಿಯಿಂದ ಇದಕ್ಕೆ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ. ಅಲ್ಲದೇ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಪುನೀತ್ ಅಗಲಿಕೆಯ ನೋವನ್ನು ತಡೆದುಕೊಳ್ಳುವ ಶಕ್ತಿ ಚಿತ್ರರಂಗಕ್ಕೆ ಇಲ್ಲ.

ಕಾರ್ಯಕ್ರಮಕ್ಕೆ ಶಿವಣ್ಣ ಒಪ್ಪಿದ್ದಾರೆ. ರಾಜ್ಯದ ಗಣ್ಯರು, ಚಿತ್ರರಂಗದ ಕುಟುಂಬ, ಆಂಧ್ರ, ತಮಿಳುನಾಡು ಸೇರಿದಂತೆ 20 ಲಕ್ಷ ಜನ ಬರುವ ಸಾಧ್ಯತೆ ಇದೆ. ಗುರುಕಿರಣ್ ಸಂಗೀತ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ನಾಗೇಂದ್ರ ಪ್ರಸಾದ್ ವಿಶೇಷ ಹಾಡನ್ನು ಬರೆದಿದ್ದಾರೆ. ಸಾರ್ವಜನಿಕರು ಕಾರ್ಯಕ್ರಮವನ್ನು ಟಿವಿ ಮೂಲಕ ನೋಡಿ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪುನೀತ್ ಮನೆಗೆ ಆಗಮಿಸುತ್ತಿದ್ದ ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ – VIDEO

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd