JAMES | ಗಲ್ಲಾ ಪೆಟ್ಟಿಗೆಯಲ್ಲಿ ಜೇಮ್ಸ್ ಆರ್ಭಟ..!
ವಿದೇಶಗಳಲ್ಲಿ ಸೇರಿ 4000 ಸಾವಿರ ಶೋಗಳು
ಬೆಂಗಳೂರಿನಲ್ಲಿ ಎಂಟು ಕೋಟಿ ಕಲೆಕ್ಷನ್
ವಿಶ್ವದಾದ್ಯಂತ ಜೇಮ್ಸ್ 30 ಕೋಟಿ ಕಲೆಕ್ಷನ್
ಇನ್ನೇರಡು ದಿನಗಳಲ್ಲಿ 80 ಕೋಟಿ ಕಲೆಕ್ಷನ್
ಕರುನಾಡ ರಾಜರತ್ನ ಡಾ.ಪುನೀತ್ ರಾಜ್ ಕುಮಾರ್ ಅಭಿನಯ ಕೊನೆಯ ಸಿನಿಮಾ ಜೇಮ್ಸ್ ಗುರುವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ.
ಕರ್ನಾಟಕದ ಮಟ್ಟಿಗೆ ಜೇಮ್ಸ್ ಸಿನಿಮಾಗೆ ಸಿಕ್ಕ ಓಪನಿಂಗ್ ಈ ಹಿಂದೆ ಯಾವ ಸಿನಿಮಾಗೂ ಸಿಕ್ಕಿರಲಿಲ್ಲ. ಕನ್ನಡಿಗರು ಜೇಮ್ಸ್ ಸಿನಿಮಾವನ್ನು ಮಗುವಂತೆ ಸ್ವಾಗತಿಸಿದ್ದಾರೆ.
ಸದ್ಯ ಎಲ್ಲವೂ ಜೇಮ್ಸ್ ಮಯವಾಗಿದ್ದು, ಗುರುವಾರ ವಿದೇಶಗಳಲ್ಲಿ ಸೇರಿ 4000 ಸಾವಿರ ಶೋಗಳು ನಡೆದಿದೆ.
ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಟಿಕೆಟ್ ಗಳು ಸೋಲ್ಡ್ ಔಟ್ ಅಗಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿವೆ.

ಜೇಮ್ಸ್ ಸಿನಿಮಾ ಹೇಗಿದೆ..? ಇದರ ಪ್ಲಸ್, ಮೈನಸ್ ಪಾಯಿಂಟ್ಸ್ ಏನು ಎನ್ನುವುದಕ್ಕಿಂತ ಅಪ್ಪುಗಾಗಿ ಸಿನಿಮಾ ನೋಡಲೇ ಬೇಕು.
ಆದ್ರೂ ಕಲೆಕ್ಷನ್ ಬಗ್ಗೆ ಒಂದಿಷ್ಟು ಕುತೂಹಲ ಇದ್ದೇ ಇರುತ್ತದೆ. ಮೂಲಗಳ ಪ್ರಕಾರ ಜೇಮ್ಸ್ ಸಿನಿಮಾ ಬೆಂಗಳೂರಿನಲ್ಲಿ ಮೊದಲ ದಿನ 8 ಕೋಟಿ ಕಲೆಕ್ಷನ್ ಮಾಡಿದೆಯಂತೆ.
ವಿಶ್ವದಾದ್ಯಂತ ಒಂದೇ ದಿನಕ್ಕೆ 25 ರಿಂದ 30 ಕೋಟಿ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ಇದೇ ಟ್ರೆಂಡ್ ಮುಂದುವರಿದರೆ ವೀಕೆಂಡ್ ಎಲ್ಲಾ ಸೇರಿಕೊಂಡು ಒಟ್ಟಾರೆ 80 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಟ್ರೇಡ್ ವರ್ಗಗಳು ಅಂದಾಜು ಮಾಡುತ್ತಿವೆ. Puneeth Rajkumar starrer James movie first day collection 30 crore








