ಅಪ್ಪು ವಾಕಿಂಗ್ ಮಾಡುತ್ತಿರುವ ವೈರಲ್ ಫೋಟೋದ ಸೀಕ್ರೆಟ್….

1 min read

ಅಪ್ಪು ವಾಕಿಂಗ್ ಮಾಡುತ್ತಿರುವ ವೈರಲ್ ಫೋಟೋದ ಸೀಕ್ರೆಟ್….

ಬೆಂಗಳೂರು: ಕೋಟ್ಯಾಂತರ ಕರುನಾಡಿಗರನ್ನ ಅಗಲಿ ಇಹಲೋಕ ತ್ಯಜಿಸಿರುವ ಅಪ್ಪು ಅವರು ಸದಾ ಅಭಿಮಾನಿಗಳ ಹೃದಯದಲ್ಲಿ  , ಅವರ ಸಿನಿಮಾಗಳ ಮೂಲಕ , ನಗುಮೊಗದ ಮೂಲಕ ನಮ್ಮ ಜೊತೆಗೆ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಅಭಿಮಾನಿಗಳು ,  ಇಡೀ ರಾಜ್ಯದ ಜನ ಅಷ್ಟೇ ಅಲ್ಲ ಪರಭಾಷಿಗರು ಕೂಡ  ಅಪ್ಪು ಫೋಟೋಗಳನ್ನ ಶೇರ್ ಮಾಡುತ್ತಾ ಭಾವುಕಾರಗುತ್ತಾ , ಭಾವತಾತ್ಮಕವಾಗಿ ಪೋಸ್ಟ್ ಗಳನ್ನ ಮಾಡ್ತಾಯಿದ್ದಾರೆ. ಅಪ್ಪುವನ್ನ ನೆನೆಯದ ದಿನವಿಲ್ಲ. ಅಪ್ಪುವನ್ನ ನೆನೆಯದ ಕ್ಷಣವಿಲ್ಲ..

ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಕಡೆ ಕ್ಷಣದ ಫೋಟೋಗಳು ಅಂತ ಹೇಳಲಾಗಿದ್ದ ಸಾಕಷ್ಟು ಫೋಟೋ ವಿಡಿಯೋಗಳು ಸಹ ಹರಿದಾಡಿದ್ದವು. ಆದ್ರೆ ಅವುಗಳಲ್ಲಿ ಬಹುತೇಕವು ಸುಳ್ಳು , ಹಳೆಯ ಫೋಟೋ ವಿಡಿಯೋಗಳು ಅಂತ ಹೇಳಲಾಗಿದೆ.  ಇದೇ ರೀತಿ ಪುನೀತ್ ರಾಜ್ ಕುಮಾರ್ ಪಾರ್ಕ್ ಒಂದ್ರಲ್ಲಿ ವಾಕಿಂಗ್ ಮಾಡ್ತಾಯಿದ್ದ ಫೋಟೋ ಒಂದು ಕೂಡ ಸಖತ್ ವೈರಲ್ ಆಗಿತ್ತು. ಅಲ್ಲದೇ  ವಾಕಿಂಗ್‌ ಮಾಡುವಾಗಲೇ ಅಪ್ಪು ಎದೆನೋವಿನಿಂದ ಬಳಲುತ್ತಿದ್ದರು ಎಂದು ಕ್ಯಾಪ್ಷನ್ ಸಹ ನೀಡಿ  ಹಲವರು ಇದನ್ನ ಶೇರ್ ಮಾಡಿದ್ದರು.Puneet Raj kumar

ಫೋಟೋದಲ್ಲಿ ಪುನೀತ್ ರಾಜ್ ಕುಮಾರ್ ಅವರು ಎದೆ ಮೇಲೆ ಕೈ ಇಟ್ಟುಕೊಂಡಿರೋ ರೀತಿ ಕಾಣುತ್ತಿದೆ. ಆದ್ರೆ ಅಪ್ಪು ಅವರ ಮುಂದೆ ವ್ಯಕ್ತಿಯೊಬ್ರು  ಪುನೀತ್ ಅವರಿಗೆ ನಮಸ್ಕರಿಸಿದ್ದರು. ಆಗ ಅದಕ್ಕೆ  ಪ್ರತಿಯಾಗಿ ಪುನೀತ್ ಕೂಡ ಅವರಿಗೆ ನಮಸ್ಕರಿಸಿರುವ ದೃಶ್ಯವದು.  ಕೈ ಎದೆ ಹತ್ತಿರ ಹೋಗಿದ್ದ ಕಾರಣ ಜನರು ಈ ಫೋಟೋವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರು.

ಸಾಧುಕೋಕಿಲ ನಿರ್ದೇಶನದಲ್ಲಿ ಮೂಡಿಬಂದಿದೆ “ಮಹಾಯೋಗಿ ಸಿದ್ದರೂಢ”.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd