Punishment of Creditors-ಯುವಕನೊಬ್ಬನು ಸಾಲವನ್ನ ನೀಡದ ಕಾರಣಕ್ಕೆ ಸ್ಕೂಟರ್ಗೆ ಕಟ್ಟಿ ರಸ್ತೆ ಮದ್ಯೆ ಎಳೆದೊಯ್ದ ಆಘಾತಕಾರಿ ವಿಲಕ್ಷಣ ಘಟನೆಯೊಂದರಲ್ಲಿ, ಓಡಿಸ್ಸಾದ ಕಟಕ್ನಲ್ಲಿ ನಡೆದಿದೆ ಹಣವನ್ನು ಹಿಂತಿರುಗಿಸದ ವ್ಯಕ್ತಿಯನ್ನು ಸ್ಕೂಟರ್ಗೆ ಕಟ್ಟಿ ಬೀದಿಗಳಲ್ಲಿ ಎಳೆದೊಯ್ದಿದ್ದಾರೆ.
ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಈ ವಿಷಯವನ್ನು ತಿಳಿದ ಪೊಲೀಸರು ಸೋಮವಾರ ಘಟನೆಯಲ್ಲಿ ಭಾಗಿಯಾದವರು ಮತ್ತು ವಿಡಿಯೋ ವೈರಲ್ಲ್ ಮಾಡಿದ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
2 ರಿಂದ 3 ಬೈಕ್ಗಳ ಹಿಂದೆ ಯುವಕನು ಒಡುತ್ತಿದ್ದು ಅದರಲ್ಲಿರುವ ಒಂದು ಬೈಕ್ ಗೆ ಕಟ್ಟಿಹಾಕಿದ್ದಾರೆ ಈ ದೃಷ್ಯವನ್ನು ವಿಡಿಯೋದಲ್ಲಿ ಕಾಣಬಹುದಾಗಿ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ವ್ಯಕ್ತಿಯನ್ನು ಕಟಕ್ನ ಶೆಲ್ಟರ್ ಚಕ್ನಿಂದ ಸುಮಾರು 2 ಕಿಮೀ ಅಂತರದಲ್ಲಿರುವ ಮಿಷನ್ ರಸ್ತೆಯ ವರೆಗೂ ಎಳೆದು ಕೊಂಡು ಹೊಗಿದ್ದಾರೆ. ಈ ಘಟನೆಯು ಭಾನುವಾರ ಸಂಜೆ ನಡೆದಿದೆ ಎಂದು ಪೋಲಿಸ್ ವರದಿಯ ಪ್ರಕಾರ ತಿಳಿದು ಬಂದಿದೆ .