88 ರ ಇಳಿವಯಸ್ಸಿನಲ್ಲಿ 5 ಕೋಟಿ ಲಾಟರಿ ಗೆದ್ದ ಅಜ್ಜ…
ಕಳೆದ ನಲವತ್ತು ವರ್ಷಗಳಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ವ್ಯಕ್ತಿಗೆ ಕೊನೆಗೂ ಲಕ್ಷ್ಮಿ ಒಲಿದಿದ್ದು 88 ವಯಸ್ಸಿನ ವೃದ್ಧರೊಬ್ಬರು 5 ಕೊಟಿ ಲಾಟರಿ ಗೆದ್ದಿರುವ ಘಟನೆ ಪಂಜಾಬ್ ನಲ್ಲಿ ವರದಿಯಾಗಿದೆ. ಪಂಜಾಬ್ನ ಡೇರಾ ಬಸ್ಸಿಯ 88 ವರ್ಷದ ವೃದ್ಧ, 5 ಕೋಟಿ ರೂ ಲಾಟರಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾಗಿ ನಗೆ ಬೀರಿದ್ದಾರೆ.
ಡೇರಾ ಬಸ್ಸಿ ಪಟ್ಟಣದ ತ್ರಿವೇದಿ ಕ್ಯಾಂಪ್ ನಿವಾಸಿಯಾಗಿರುವ ಮಹಾಂತ ದ್ವಾರಕ ದಾಸ್, ಸಂಕ್ರಾಂತಿ ಹಬ್ಬದಂದು ಬಂಪರ್ ಲಾಟರಿಯನ್ನ ಗೆದ್ದಿದ್ದಾರೆ. ಬಾಲ್ಯದಿಂದ ವೃದ್ಧಾಪ್ಯದವರೆಗೂ ಕಷ್ಟದ ಬದುಕು ಸವೆಸಿದ್ದ ಅವರ ಬದುಕನ್ನೇ ಈ ಲಾಟರಿ ಸಂಪೂರ್ಣವಾಗಿ ಬದಲಿಸಿದೆ.
ತಮ್ಮ ಹಾಗೂ ಕುಟುಂಬದ ಜೀವನದ ಗತಿಯನ್ನು ಬದಲಿಸುವ ಆಶಯದೊಂದಿಗೆ ಲಾಟರಿ ಟಿಕೆಟ್ಗಳನ್ನು ಖರೀದಿ ಮಾಡುತ್ತಿದ್ದುದ್ದಾಗಿ ದಾಸ್ ತಿಳಿಸಿದ್ದಾರೆ. ತಮಗೆ ಲಾಟರಿಯಿಂದ ಬರುವ ಹಣವನ್ನು ಸಂಪೂರ್ಣವಾಗಿ ತಾವೇ ಬಳಸಿಕೊಳ್ಳುವ ಆಸೆ ಅವರಿಗಿಲ್ಲ. ಅರ್ಧದಷ್ಟು ಹಣವನ್ನು ಅವರು ‘ಡೇರಾ’ಕ್ಕೆ ನೀಡಲು ಹಾಗೂ ಉಳಿದ ಅರ್ಧವನ್ನು ತಮ್ಮ ಇಬ್ಬರೂ ಮಕ್ಕಳಿಗೆ ಸಮಾನಾಗಿ ಹಂಚಿಕೆ ಮಾಡಲು ನಿರ್ಧರಿಸಿದ್ದಾ ಅವರು ಸುಮಾರು 35-40 ವರ್ಷಗಳಿಂದ ಲಾಟರಿ ಖರೀದಿಸುತ್ತಿದ್ದರಂತೆ.
ಜಿರಾಕ್ಪುರದಲ್ಲಿ ಲಾಟರಿ ವ್ಯಾಪಾರ ನಡೆಸುತ್ತಿರುವ ಮತ್ತು ದಾಸ್ ಅವರಿಗೆ ಲಾಟರಿ ಟಿಕೆಟ್ ಮಾರಾಟ ಮಾಡಿದ್ದ ಲೋಕೇಶ್, ತೆರಿಗೆಗಳ ಕಡಿತದ ಬಳಿಕ ದ್ವಾರಕಾ ದಾಸ್ಗೆ ಸುಮಾರು 3.5 ಕೋಟಿ ರೂ ಸಿಗಲಿದೆ ಎಂದು ತಿಳಿಸಿದ್ದಾರೆ. ಶೇ 30ರಷ್ಟು ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ಅವರಿಗೆ ನೀಡಲಾಗುತ್ತದೆ” ಎಂದು ಸಹಾಯಕ ಲಾಟರಿ ನಿರ್ದೇಶಕ ಕರಮ್ ಸಿಂಗ್ ತಿಳಿಸಿದ್ದಾರೆ.
Punjab Lottery: Grandfather won 5 crore lottery at the tender age of 88…








