ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ವಿರುದ್ಧ ನಡೆದ 42ನೇ ಪಂದ್ಯದಲ್ಲಿ ಅತೀ ದೊಡ್ಡ ಸ್ಕೋರ್ ಚೇಸ್ ಮಾಡಿದ ದಾಖಲೆಯೊಂದು ಮೂಡಿದೆ.
ಬೃಹತ್ ಗುರಿಯನ್ನು ಚೇಸ್ ಮಾಡುವ ಮೂಲಕ ಪಂಜಾಬ್ ತಂಡ ಹೊಸ ದಾಖಲೆ ಬರೆದಿದೆ. 262 ರನ್ ಗಳ ಗುರಿ ಚೇಸ್ ಮಾಡಿದ ಪಂಜಾಬ್ ತಂಡವು ಅತೀ ದೊಡ್ಡ ಸ್ಕೋರ್ ಚೇಸ್ ಮಾಡಿದ ದಾಖಲೆ ಬರೆದಿದೆ. ಕೆಕೆಆರ್ ಎದುರು ಪ್ರಭಾಸಿಮ್ರಾನ್ ಸಿಂಗ್,ಜಾನಿ ಬೈರ್ಸ್ಟೋವ್ ಮತ್ತು ಶಶಾಂಕ್ ಸಿಂಗ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಈ ಮೂಲಕ 17 ವರ್ಷದ ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೆಕೆಆರ್ ನೀಡಿದ 262 ರನ್ ಟಾರ್ಗೆಟ್ ಅನ್ನು ಪಂಜಾಬ್ 18.4 ಓವರ್ಗಳಲ್ಲಿ ತಲುಪಿ ದಾಖಲೆ ಬರೆದಿದೆ.
ಕೆಕೆಆರ್ ನೀಡಿದ 262 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಪರ ಜಾನಿ ಬೈರ್ಸ್ಟೋವ್ 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 9 ಸಿಕ್ಸರ್ಗಳ ನೆರವಿನಿಂದ ಅಜೇಯ 108 ರನ್ ಗಳಿಸಿದರು. ಶಶಾಂಕ್ ಸಿಂಗ್ ಕೇವಲ 28 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ 68 ರನ್ ಗಳಿಸಿದರು. ಪ್ರಭಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 54, ರಿಲೀ ರೂಸೋ 16 ಎಸೆತಗಳಲ್ಲಿ 26 ರನ್ಗಳಿಸಿದರು.
18.4 ಓವರ್ಗಳಲ್ಲಿ 262 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಐಪಿಎಲ್ನಲ್ಲಿ ಗರಿಷ್ಠ ಚೇಸ್ ಮಾಡಿದ ದಾಖಲೆಗೆ ಪಾತ್ರವಾಗಿದೆ. ಹಿಂದೆ ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಎರಡು ಬಾರಿ 224ರನ್ ಚೇಸ್ ಮಾಡಿದ ದಾಖಲೆ ಮಾಡಿತ್ತು. ಪಂಜಾಬ್ ಕೇವಲ ಐಪಿಎಲ್ನಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಟಿ20, ವಿಶ್ವ ಟಿ20 ಲೀಗ್ಗಳಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ದಾಖಲೆ ಬರೆದಂತಾಗಿದೆ.