Puri Jagannadh | ಲೈಗರ್ ಎಫೆಕ್ಟ್ : ಫ್ಲಾಟ್ ಖಾಲಿ ಮಾಡಿದ ಪೂರಿ ?
ಲೈಗರ್ ಫ್ಲಾಪ್ ನೊಂದಿಗೆ ನಿರ್ದೇಶಕ ಪೂರಿ ಜಗನ್ನಾಥ್ ಮತ್ತೊಮ್ಮೆ ಕಷ್ಟಕ್ಕೆ ಸಿಲುಕಿದ್ದಾರೆ. ಮಾಸ್, ಡ್ಯಾಶಿಂಗ್ ಡೈರೆಕ್ಟರ್… ಸಿನಿಮಾ ರಂಗದಲ್ಲಿ ತಮ್ಮದೇಯಾದ ಸ್ಪೆಷಲ್ ಇಮೇಜ್ ಸಂಪಾದಿಸಿದ್ದ ಪೂರಿ ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಸಿನಿಮಾಗಳು ತೆಗೆದು ಸಾಲದ ಸುಳಿಗೆ ಸಿಲುಕಿದ್ದರು.
ಆ ನಂತರ ಇಸ್ಮಾರ್ಟ್ ಶಂಖರ್ ಸಿನಿಮಾದೊಂದಿಗೆ ಮತ್ತೊಮ್ಮೆ ಅವರು ಸಕ್ಸಸ್ ಟ್ರ್ಯಾಕ್ ಗೆ ಬಂದಿದ್ದರು. ಅದೇ ಜೋಷ್ ನಲ್ಲಿ ಲೈಗರ್ ಸಿನಿಮಾವನ್ನು ಅತ್ಯಂತ ಪ್ರತಿಷ್ಠಾತ್ಮಕವಾಗಿ ಭಾರಿ ಬಜೆಟ್ ನಲ್ಲಿ ಮಾಡಿದರು. ಪಾನ್ ಇಂಡಿಯಾ ಸಿನಿಮಾ ಆಗಿ ತಯಾರಾದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತೆ ಅಂತಾ ಸಿನಿಮಾ ಟೀಂ ನಿರೀಕ್ಷೆ ಇಟ್ಟುಕೊಂಡಿತ್ತು. ಆದ್ರೆ ಲೈಗರ್ ರಿಲೀಸ್ ಆದಮೇಲೆ ಸೀನ್ ರಿವರ್ಸ್ ಆಯ್ತು. ಬಾಕ್ಸ್ ಆಫೀಸ್ ಬಳಿ ಲೈಗರ್ ಸಿನಿಮಾ ಹೀನಾಯ ಸೋಲುಂಡಿದೆ. ಇದರೊಂದಿಗೆ ಸಿನಿಮಾದ ವ್ಯಾಪಾರದಲ್ಲಿ ಭಾಗಿಯಾಗಿದ್ದ ಡಿಸ್ಟ್ರಿಬ್ಯೂಟರ್ ಗಳು ಭಾರಿ ನಷ್ಟ ಅನುಭವಿಸಿದ್ದಾರೆ.
ಇದರೊಂದಿಗೆ ಬಾಲಿವುಡ್ ಡಿಸ್ಟ್ರಿಬ್ಯೂಟರ್ಸ್ ತಮ್ಮ ಹಣವನ್ನು ವಾಪಸ್ ಕೊಡುವಂತೆ ಸಿನಿಮಾ ನಿರ್ಮಾಪಕರ ಮೇಲೆ ಒತ್ತಡ ಹೇರುತ್ತಿದ್ದಾರಂತೆ. ಇನ್ನು ಮ್ಯೂವಿಗೆ ಕರಣ್ ಜೋಹಾರ್ ಜೊತೆಗೆ ಪೂರಿ, ಚಾರ್ಮಿ ಹಣ ಹಾಕಿದ್ದರು. ಆದ್ರೆ ಲೈಗರ್ ಚಿತ್ರೀಕರಣ ಎಲ್ಲವೂ ಮುಂಬೈನಲ್ಲಿಯೇ ನಡೆದಿದೆ. ಈ ಹಿನ್ನೆಲೆಯಲ್ಲಿ ಪೂರಿ ಜಗನ್ನಾಥ್ ಒಂದು ಫ್ಲಾಟ್ ಬಾಡಿಗೆ ಪಡೆದುಕೊಂಡಿದ್ದರು. ಆದ್ರೆ ಇದೀಗ ಆ ಫ್ಲಾಟ್ ಅನ್ನು ಖಾಲಿ ಮಾಡಿದ್ದಾರಂತೆ.
ಪೂರಿ ಜಗನ್ನಾಥ್ 10 ಲಕ್ಷ ರೂಪಾಯಿಗಳಂತೆ ಬಾಡಿಗೆ ಪಡೆದುಕೊಂಡಿದ್ದರು. ಆದ್ರೆ ಇದೀಗ ಹಣವನ್ನು ಕಟ್ಟೋಕೆ ಆಗದೇ ಪೂರಿ ಜಗನ್ನಾಥ್ ಫ್ಲಾಟ್ ಯಿಂದ ಹೊರ ಬಂದಿದ್ದಾರಂತೆ. ಇದಕ್ಕೆ ಲೈಗರ್ ಸೋಲೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.