ನಟ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಸಂದರ್ಭದಲ್ಲೇ ರಗಡ್ ಅವತಾರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ಅವರ ಪೋಸ್ಟರ್ ಔಟ್ ಆಗಿದೆ.
ಅಲ್ಲು ಅರ್ಜುನ್ ಖಡಕ್ ಆಗಿರುವ ಪೋಸ್ಟರ್ವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಚಿತ್ರ ತಂಡ ಅಭಿಮಾನಿಗಳಿಗೆ ಅಪ್ಡೇಟ್ ನೀಡಿದೆ. ಚೇರ್ ಮೇಲೆ ಕುಳಿತು ಪುಷ್ಪರಾಜ್ (ಅಲ್ಲು ಅರ್ಜುನ್) ಖಡಕ್ ಆಗಿ ಪೋಸ್ ನೀಡಿದ್ದಾರೆ. ನಟನ ಲುಕ್ ನೋಡಿ ಫ್ಯಾನ್ಸ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
‘ಪುಷ್ಪ 2’ ಚಿತ್ರದ ಬಿಡುಗೆಡೆ ಕುರಿತು ಈಗಾಗಲೇ ಹಲವಾರು ವದಂತಿಗಳು ಹಬ್ಬಿದ್ದವು. ಹೀಗಾಗಿ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವುದಿಲ್ಲ ಎನ್ನಲಾಗಿತ್ತು. ಈ ಮಧ್ಯೆ ಹೊಸ ಪೋಸ್ಟರ್ ಮೂಲಕ ಅಲ್ಲು ಅರ್ಜುನ್ ಕ್ಲ್ಯಾರಿಟಿ ನೀಡಿದ್ದಾರೆ. ‘ಪುಷ್ಪ 2’ ಡಿ.6ರಂದೇ ರಿಲೀಸ್ ಆಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಅನಸೂಯ, ರಾವ್ ರಮೇಶ್, ಫಹಾದ್ ಫಾಸಿಲ್ ಸೇರಿದಂತೆ ಹಲವರು ನಟಿಸಿದ್ದಾರೆ.