ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಾರ ? ಅಲ್ಲು ಅರ್ಜುನ್…
ನಿರ್ದೇಶಕ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದ ಪುಷ್ಪ ಚಿತ್ರದಲ್ಲಿ ಅತ್ಯುತ್ತಮ ಅಭಿನಯದ ಮೂಲಕ ಅಲ್ಲು ಅರ್ಜುನ್ ಜನಮನ ಗೆದ್ದಿದ್ದಾರೆ. ಬ್ಲಾಕ್ಬಸ್ಟರ್ ಚಿತ್ರದ ನಂತರ, ಟಾಲಿವುಡ್ ಸೆನ್ಸಷನ್ ಅಲ್ಲು ಅರ್ಜುನ್ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಈ ಚಿತ್ರದ ನಂತರ ಅಲ್ಲು ಅರ್ಜುನ್ ಬೇಡಿಕೆ ಗಗನ ಮುಟ್ಟಿದೆ ಇವರ ಮುಂದಿನ ಚಿತ್ರಗಳ ಲೀಸ್ಟ್ ರೈಲು ಬಂಡಿಯಂತಾಗಿದೆ. ಅಲ್ಲು ಅರ್ಜುನ್ ಸಹಿ ಮಾಡಿರುವ ಮತ್ತು ಮಾತುಕತೆ ನಡೆಸುತ್ತಿರುವ ಮುಂಬರುವ ಚಿತ್ರಗಳ ಪಟ್ಟಿ ಇಲ್ಲಿದೆ.
ಪುಷ್ಪಾ: ದ ರೂಲ್
ಪುಷ್ಪಾ ಯಶಸ್ಸಿನ ನಂತರ, ಅಲ್ಲು ಅರ್ಜುನ್, ಪುಷ್ಪ: ದಿ ರೂಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸುಕುಮಾರ್ ಅವರು “ಪ್ಲಾನ್ ಪ್ರಕಾರ ಚಿತ್ರೀಕರಣ ಮುಗಿಸಿ ಡಿಸೆಂಬರ್ 2022 ರಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಟ್ಯೂನ್ ಕಂಪ್ಯೂಸ್ ಮಾಡಲಿದ್ದಾರೆ.
ವೇಣು ಶ್ರೀರಾಮ್ ಜೊತೆ ಐಕಾನ್
ಪುಷ್ಪಾ: ದಿ ರೂಲ್ ಚಿತ್ರೀಕರಣದ ಅಲ್ಲು ಅರ್ಜುನ್ ಬಹು-ಚರ್ಚಿತ ಚಲನಚಿತ್ರ ಐಕಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂಸಿಎ (ಮಿಡಲ್ ಕ್ಲಾಸ್ ಅಬ್ಬಾಯಿ) ಮತ್ತು ವಕೀಲ್ ಸಾಬ್ ಖ್ಯಾತಿಯ ವೇಣು ಶ್ರೀರಾಮ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ದಿಲ್ ರಾಜು ಅವರ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಐಕಾನ್ ಸಿನಿಮಾ ನಿರ್ಮಿಸಲಿದೆ.
ಕೊರಟಾಲ ಶಿವ ಅವರೊಂದಿಗಿನ ಚಿತ್ರ
ಕೊರಟಾಲ ಶಿವ ನಿರ್ದೇಶನದ ಹೆಸರಿಡದ ಬಿಗ್ ಬಜೆಟ್ ಚಿತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರೆ. ಗೌರವ್ ಪರೀಕ್, ಮೊನೊಜಿತ್ ಶಿಲ್ ಮತ್ತು ಅಮನ್ ಶರ್ಮಾ ಅವರನ್ನು ಪೋಷಕ ಪಾತ್ರಗಳಲ್ಲಿ ನಟಿಸಲು ನಿರ್ಧರಿಸಲಾಗಿದೆ. ಯುವಸುಧಾ ಆರ್ಟ್ಸ್ ಸಹಯೋಗದಲ್ಲಿ GA2 ಪಿಕ್ಚರ್ಸ್ ಅಡಿಯಲ್ಲಿ ಸುಧಾಕರ್ ಮಿಕ್ಕಿಲಿನೇನಿ ಮತ್ತು ಸ್ಯಾಂಡಿ ಸ್ವಾತಿ ನಟ್ಟಿ ಚಿತ್ರವನ್ನು ನಿರ್ಮಿಸಲಿದ್ದಾರೆ.
ಎಆರ್ ಮುರುಗದಾಸ್ ಅವರೊಂದಿಗಿನ ಚಿತ್ರ
ಇತ್ತೀಚಿನ ವರದಿಗಳ ಪ್ರಕಾರ, ಎಆರ್ ಮುರುಗದಾಸ್ ಅವರ ಮುಂದಿನ ಚಿತ್ರದಲ್ಲಿ ಅಲ್ಲು ಅರ್ಜುನ್ ಅವರನ್ನು ನಿರ್ದೇಶಿಸುವ ಸಾಧ್ಯತೆಯಿದೆ. ಅಲ್ಲು ಅರ್ಜುನ್ ಮತ್ತು ಎಆರ್ ಮುರುಗದಾಸ್ ಹೊಸ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ, ಇದನ್ನು ಕಲೈಪುಲಿ ಎಸ್ ಧಾನು ನಿರ್ಮಿಸಲಿದ್ದಾರೆ.
ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮುಂಚಿನ ಸಂದರ್ಶನವೊಂದರಲ್ಲಿ, ನಿರ್ಮಾಪಕರು ಅಲ್ಲು ಅರ್ಜುನ್ ಅವರೊಂದಿಗೆ ಚಲನಚಿತ್ರವನ್ನು ನಿರ್ಮಿಸುವುದಾಗಿ ಹೇಳಿದ್ದಾರೆ, ಆದರೆ ನಿರ್ದೇಶಕರ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು..
ಬೋಯಪತಿ ಶ್ರೀನು ಅವರ ಮುಂದಿನ ಚಿತ್ರ
ಬಾಲಯ್ಯ ಅಭಿನಯದ ಅಖಂಡ ಚಿತ್ರದ ಯಶಸ್ಸಿನೊಂದಿಗೆ ಬೋಯಪತಿ ಶ್ರೀನು ಟಾಪ್ ಫಾರ್ಮ್‌ನಲ್ಲಿದ್ದಾರೆ. ಬೋಯಾಪಾಟಿ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಇವರಿಬ್ಬರು ಸರ್ರೈನೋಡು ಸಿನಿಮಾದಲ್ಲಿ ಜೊತೆಯಾಗಿದ್ದರು. ವರದಿಗಳ ಪ್ರಕಾರ ಈ ಚಿತ್ರವನ್ನು ಗೀತಾ ಆರ್ಟ್ಸ್ ನಿರ್ಮಿಸಲಿದೆ.
ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗಿನ ಚಿತ್ರ
ಪ್ರಶಾಂತ್ ನೀಲ್ ಅವರು ಪ್ರಭಾಸ್ ಅವರ ಸಲಾರ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಪ್ರಶಾಂತ್ ಹೆಸರು ಸಹ ಅಲ್ಲು ಅರ್ಜುನ್ ಜೊತೆ ಕೇಳಿಬರುತ್ತಿದೆ. ಸದ್ಯಕ್ಕೆ ಅಲ್ಲು ಅರ್ಜುನ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಕೇಳಿ ಬಂದಿವೆ. ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರು, ಸಿನಿಪ್ರೇಮಿಗಳು ಈಗಾಗಲೇ ಇವರ ಸಹಯೋಗದ ಬಗ್ಗೆ ಉತ್ಸುಕರಾಗಿದ್ದಾರೆ.