ಹಿಂದಿ ಪ್ರಾದೇಶಿಕ ಪ್ರದೇಶಗಳಲ್ಲಿ ಪುಷ್ಪಾ-2 ಚಿತ್ರ ಭಾರೀ ಹೈಪ್ ಮತ್ತು ನಿರೀಕ್ಷೆಗಳನ್ನು ಹೆಚ್ಚಿಸಿಬಿಟ್ಟಿದೆ. ಸಿನಿಮಾವು ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ, “ಜವಾನ್” ಚಿತ್ರವು ಹಿಂದಿ ಭಾಷೆಯಲ್ಲಿ (₹63.90 ಕೋಟಿ) ಮೊದಲ ದಿನದ ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಯನ್ನು ಹೊಂದಿದೆ. ಹಾಗೇ, “RRR” ಸಿನಿಮಾವು (₹223 ಕೋಟಿ) ವಿಶ್ವಾದ್ಯಂತ ಮೊದಲ ದಿನದ ಅತಿ ಹೆಚ್ಚು ಕಲೆಕ್ಷನ್ ರೆಕಾರ್ಡ್ ಅನ್ನು ದಾಖಲಿಸಿದೆ.
ಆದರೆ, “ಪುಷ್ಪಾ-2” ಚಿತ್ರದ ಕುರಿತಾದ ಕ್ರೇಜ್ ಮತ್ತು ಅಭಿಮಾನಿಗಳ ನಿರೀಕ್ಷೆಗಳನ್ನು ನೋಡಿದರೆ, ಈ ಚಿತ್ರವು ಈ ಎರಡೂ ದಾಖಲೆಯನ್ನು ಮೀರಿಸುವ ಸಾಧ್ಯತೆ ಇದೆ ಎಂದು ಸಿನಿಮಾ ಕ್ಷೇತ್ರದ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಈ ಚಿತ್ರಕ್ಕೆ ಇರುವ ಭಾರೀ ಅಭಿಮಾನಿ ಬಳಗ ಮತ್ತು ಅದರಲ್ಲಿ ಕಾಣಿಸಿಕೊಳ್ಳುವ ಶಕ್ತಿಶಾಲಿ ಪಾತ್ರಗಳು ಮತ್ತು ದೃಶ್ಯಾಂಶಗಳಿಂದ, ಪ್ರತಿಷ್ಠಿತ ಮಾಧ್ಯಮಗಳು ಪುಷ್ಪಾ-2 ಹೊಸ ಕ್ರಿಯೇಟ್ ಮಾಡುವಲ್ಲಿ ಯಶಸ್ಸು ಸಾಧಿಸಲಿದೆ ಎಂದು ಅಭಿಪ್ರಾಯ ಪಟ್ಟಿವೆ.
ಮೇಲ್ಮನೆ ಕದನ…ಸೋಲು ಗೆಲುವಿನ ಲೆಕ್ಕಾಚಾರ..!
ಕರ್ನಾಟಕ ವಿಧಾನಪರಿಷತ್ ಚುನಾವಣೆಯಲ್ಲಿ ಏಳು ಸ್ಥಾನಗಳಿಗೆ ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿರುವುದರಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿದೆ. ಕಾಂಗ್ರೆಸ್ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಮೂರು...






