25 ದಿನ ಬಾಕ್ಸ್ ಆಫೀಸ್ ನಲ್ಲಿ ಪುಷ್ಪ ಕಲೆಕ್ಷನ್ ಎಷ್ಟು ಗೊತ್ತಾ..??
ಡಿಸೆಂಬರ್ 17 ಕ್ಕೆ ಇಡೀ ವಿಶ್ವಾದ್ಯಂತ ರಿಲೀಸ್ ಆಗಿ ಇನ್ನೂವರೆಗೂ ಅಧ್ಬತ ಪ್ರದರ್ಶನ ಕಾಣ್ತಿರುವ ಪುಷ್ಪ ಸಿನಿಮಾಗೆ ಹೆಚ್ಚು ಕ್ರೇಜ್ ಹಿಂದಿಯಲ್ಲೇ ಇದೆ.. ಬಾಲಿವುಡ್ ಮಂದಿಯಲ್ಲಿ ‘ಪುಷ್ಪರಾಜ್’ ಕ್ರೇಜ್ ಒಂದ್ ರೇಂಜ್ ಗೆ ಹೊಗಿದ್ದು , ಅಲ್ಲುಗೆ ಹಿಂದಿಯಲ್ಲಿ ಫ್ಯಾನ್ಸ್ ಗಳ ಸಂಖ್ಯೆ ಹೆಚ್ಚಾಗಿದ್ದಾರೆ..
ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸರುವ ಪುಷ್ಪ ಸಿನಿಮಾ ಹಿಂದಿ ವರ್ಷನ್ ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ.. ಬಾಲಿವುಡ್ ಸಿನಿಮಾ ತಾರೆಯರೇ ಪುಷ್ಟವನ್ನ ಹೊಗುಳುತ್ತಿದ್ದಾರೆ..
ಅಮೇಜಾನ್ ಪ್ರೈನಲ್ಲೂ ಕೂಡ ಸಿನಿಮಾ ಸ್ಟ್ರೀಮ್ ಆಗ್ತಿದ್ದೂ ಅಲ್ಲೂ ಸಹ ಭರ್ಜರಿ ವೀವ್ಸ್ ಪಡೆದುಕೊಂಡಿದೆ.. ಆದ್ರೆ ಸಿನಿಮಾ ಮಂದಿರಗಳಲ್ಲೂ ಇನ್ನೂವರೆಗೂ ಪುಷ್ಪ ಹವಾ ನಿಂತಿಲ್ಲ.. ಹಿಂದಿಯಲ್ಲಿ ಸಿನಿಮಾ ಈಗಲೂ ಸಕ್ಸಸ್ ಫುಲ್ ಆಗಿ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣ್ತಿದೆ..
ಪುಷ್ಪ ದಿ ರೈಸ್ ಸಿನಿಮಾ ಬಾಲಿವುಡ್ ನ ‘83’ ಮತ್ತು ಹಾಲಿವುಡ್ ನ ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಚಿತ್ರಗಳ ಪೈಪೋಟಿಯ ಹೊರತಾಗಿಯೂ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಮಾಡಿದೆ.. ವರದಿಯ ಪ್ರಕಾರ, ಚಿತ್ರವು ಈವರೆಗೂ 325 ಕೋಟಿ ರೂಪಾಯಿಗಳ ಕಲೆಕ್ಟನ್ ಗಡಿದಾಟಿದೆ.. 400 ಕೋಟಿಯತ್ತ ಶೀಘ್ರವೇ ಸಾಗಲಿದೆ.. ಹಿಂದಿ ಅವತರಿಣೆಯೊಂದರಿಂದಲೇ 83 ಕೋಟಿಗೂ ಅಧಿಕ ಕಲೆಕ್ಷನ್ಮಾಡಿದೆ ಎನ್ನಲಾಗಿದೆ..
ಪುಷ್ಪ 23 ದಿನಗಳ ಅಂತ್ಯದ ವೇಳೆಗೆ ಪುಷ್ಪ ವಿಶ್ವದಾದ್ಯಂತ 326 ಕೋಟಿ ರೂಪಾಯಿಗಳನ್ನು ಗಳಿಸಿದೆ. ಟ್ವಿಟ್ಟರ್ನಲ್ಲಿ ಟ್ರೇಡ್ ವಿಶ್ಲೇಷಕ ತರಣ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.. #ಪುಷ್ಪಾ 23 ದಿನಗಳಲ್ಲಿ ರೂ ವಿಶ್ವಾದ್ಯಂತ ಸುಮಾರು ರೂ 326.6 ಕೋಟಿ ರೂಪಾಯಿಗಳನ್ನ ಗಳಿಸಿದೆ.
ಭಾರತದಲ್ಲೇ ಸುಮಾರು 250 ಕೋಟಿ ರೂ ಗಳಿಸಿದೆ ಎಂದು ತಿಳಿಸಿದ್ದಾರೆ.. ಜೊತೆಗೆ ಪುಷ್ಪ ಹಿಂದಿ ಅವತರಿಣಿಕೆಯು ಜನವರಿ 14 ಕ್ಕೆ ಅಮೇಜಾನ್ ನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ..