ಆಸ್ಟ್ರೇಲಿಯನ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಹಾಗೂ ಕೆ. ಶ್ರೀಕಾಂತ್ ಹೊರಗೆ ಬಿದ್ದಿದ್ದಾರೆ.
ಭಾರತೀಯ ಆಟಗಾರನಾದ ಪ್ರಿಯಾಂಶು ರಾಜಾವತ್ ಕ್ವಾರ್ಟರ್ ಫೈನಲ್ ನಲ್ಲಿ ಕೆ.ಶ್ರೀಕಾಂತ್ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ವಿಶ್ವದ ನಂ. 9 ಆಟಗಾರ ಎಚ್.ಎಸ್. ಪ್ರಣಯ್ ಭಾರೀ ಹೋರಾಟ ನಡೆಸಿ ನಂ. 2 ಖ್ಯಾತಿಯ ಇಂಡೋನ್ಷ್ಯನ್ ಆಟಗಾರ ಆಂಟನಿ ಸಿನಿಸುಕ ಗಿಂಟಿಂಗ್ ಅವರಿಗೆ ಸೋಲುಣಿಸಿದರು.
ಸದ್ಯ ಸತತ ವೈಫಲ್ಯದಿಂದ 17ನೇ ಸ್ಥಾನಕ್ಕೆ ಕುಸಿದಿರುವ ಪಿ.ವಿ. ಸಿಂಧು ಚೀನಾ ಮೂಲದ ಅಮೆರಿಕನ್ ಆಟಗಾರ್ತಿ ನಂ.12ನೇ ಶ್ರೇಯಾಂಕದ ಬೀವೆನ್ ಜಾಂಗ್ ವಿರುದ್ಧ ಸೋಲನುಭವಿಸಿದ್ದಾರೆ. ಇದು ಜಾಂಗ್ ವಿರುದ್ಧ ಆಡಿದ 11 ಪಂದ್ಯಗಳಲಲ್ ಸಿಂಧು ಅಭವಿಸಿದ 5ನೇ ಸೋಲಾಗಿದೆ. ಸಿಂಧು ಮೊದಲೆರಡು ಪಂದ್ಯಗಳಲ್ಲಿ ಭಾರತೀಯರೇ ಆದ ಅಶ್ಮಿತಾ ಚಾಲಿಹಾ ಮತ್ತು ಆಕರ್ಷಿ ಕಶ್ಯಪ್ ಅವರನ್ನು ಮಣಿಸಿದ್ದರು.








