PV Sindhu : P V ಸಿಂಧು ತರಬೇತಿಗೆ ವಿದಾಯ ಹೇಳಿದ ಕೋಚ್ ಪಾರ್ಕ್ ಟಿ ಸಾಂಗ್……
ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅವರ ವೈಯಕ್ತಿಕ ಕೋಚ್ ದಕ್ಷಿಣ ಕೊರಿಯಾದ ಪಾರ್ಕ್ ಟಿ ಸಾಂಗ್ ಅವರು ತಮ್ಮ ಕೋಚ್ ಸೇವೆಗೆ ವಿದಾಯ ಹೇಳಿದ್ದಾರೆ. ಇದನ್ನ ಪಾರ್ಕ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ನಲ್ಲಿ ಬಹಿರಂಗಪಡಿಸಿದ್ದಾರೆ.
ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನಂತರ, ಸಿಂಧು ತನ್ನ ಎಡ ಹಿಮ್ಮಡಿಯ ಗಾಯದಿಂದಾಗಿ ಸುಮಾರು ಐದು ತಿಂಗಳ ಕಾಲ ವಿರಾಮ ತೆಗೆದುಕೊಂಡರು. ನಂತರ ಕಣಕ್ಕಿಳಿದ ಸಿಂಧು ಮಲೇಷ್ಯಾ ಮತ್ತು ಇಂಡಿಯಾ ಓಪನ್ ಸೇರಿದಂತೆ ಹಲವಾರು ಪಂದ್ಯಾವಳಿಗಳ ಮೊದಲ ಸುತ್ತಿನಲ್ಲಿ ನಿರ್ಗಮಿಸಿದ್ದು ಕೋಚ್ ಒಪ್ಪಂದದ ಮೇಲೆ ಪರಿಣಾಮ ಬೀರಿದಂತೆ ಕಾಣಿಸುತ್ತಿದೆ. ಅಲ್ಲದೆ, ದುಬೈನಲ್ಲಿ ನಡೆದ ಏಷ್ಯನ್ ಮಿಶ್ರ ಚಾಂಪಿಯನ್ಶಿಪ್ನಲ್ಲಿ ಕೆಳ ಕ್ರಮಾಂಕದ ಆಟಗಾರರ ಕೈಯಲ್ಲಿ ಸೋತಿರುವುದು ಸಿಂಧು ಗೆ ಕೋಚ್ ಬದಲಾವಣೆಯ ಬಗ್ಗೆ ಯೋಚಿಸುವಂತೆ ಮಾಡಿದೆ. ಮತ್ತೊಂದೆಡೆ, ಈ ಋತುವಿನಲ್ಲಿ ಸಿಂಧು ಅವರ ಸೋಲಿಗೆ ನಾನೇ ಕಾರಣ ಎಂದು ಪಾರ್ಕ್ ಹೇಳಿದ್ದಾರೆ. ಸಿಂಧು ಟೋಕಿಯೋ ಕಂಚಿನ ಪದಕ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕಗಳನ್ನ ಪಾರ್ಕ್ ಟಿ ಸಾಂಗ್ ಅವರ ತರಬೇತಿಯಲ್ಲೇ ಪಡೆದಿದ್ದರು.
ಪಾರ್ಕ್ ಸಿಂಧು ಅವರ ವೃತ್ತಿಜೀವನದಲ್ಲಿ ಮೂರನೇ ಕೋಚ್ ಆಗಿದ್ದಾರೆ. ಪಾರ್ಕ್ 2024ರ ಪ್ಯಾರಿಸ್ ಒಲಿಂಪಿಕ್ಸ್ವರೆಗೆ ಕೋಚ್ ಆಗಿ ಒಪ್ಪಂದ ಮಾಡಿಕೊಂಡಿದ್ದರು, ಆದರೆ ಅವರು ಸಿಂಧು ಅವರ ಮನವಿಯಿಂದ ಹಿಂದೆ ಸರಿದಿದ್ದಾರೆ. ಪಾರ್ಕ್ ಅವರನ್ನ ಮೂಲತಃ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾವು ಪುರುಷರ ಸಿಂಗಲ್ಸ್ ಆಟಗಾರರಿಗೆ ತರಬೇತಿ ನೀಡಲು ನೇಮಿಸಿಕೊಂಡಿತ್ತು. ಆನಂತರ ಸಿಂಧು ಮುಖ್ಯ ಕೋಚ್ ತರಬೇತಿದಾರರಾದರು.
ಇದೀಗ ಆಲ್ ಇಂಗ್ಲೆಂಡ್ ಮಾಜಿ ಚಾಂಪಿಯನ್ ಮತ್ತು ಮಲೇಷ್ಯಾದ ಮಾಜಿ ಸ್ಟಾರ್ ಷಟ್ಲರ್ ಮೊಹಮ್ಮದ್ ಹಫೀಜ್ ಹಾಶಿಮ್ ಅವರೊಂದಿಗೆ ಸುಚಿತ್ರಾ ಅಕಾಡೆಮಿ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ತಿಂಗಳು ನಡೆಯಲಿರುವ ಆಲ್ ಇಂಗ್ಲೆಂಡ್ ಚಾಂಪಿಯನ್ ಶಿಪ್ ನಲ್ಲಿ ಕಣಕ್ಕೆ ಇಳಿಯಲಿರುವ ಸಿಂಧುಗೆ ಹಾಶಿಮ್ ಮಾರ್ಗದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ.
PV Sindhu parts ways with coach Park Tae Sang