ಹೆಂಡತಿ ಜೊತೆ ಜಗಳ: ಕೋಪ ಕಡಿಮೆ ಮಾಡಿಕೊಳ್ಳಲು ಈ ಭೂಪ ಮಾಡಿದ್ದೇನು ಗೊತ್ತಾ..?
ಸಾಮಾನ್ಯವಾಗಿ ಎಲ್ಲಾ ಗಂಡ – ಹೆಂಡತಿಯರ ನಡುವೆ ಜಗಳ ಇದ್ದೇ ಇರುತ್ತೆ. ಸಂಸಾರದಲ್ಲಿ ಕಲಹ ಇದ್ದೇ ಇರುತ್ತೆ. ಹೀಗೆ ಜಗಳ ಗಲಾಟೆ ಆದಾಗ ಮಾತು ಬಿಡೋದು , ಮನೆ ಬಿಟ್ಟು ಹೋಗೋದು, ಗಂಭೀರ ರೂಪ ಪಡೆದ್ರೆ ಡೈವೋರ್ಸ್ ಪಡೆಯೋದು ಉಂಟು. ಆದ್ರೆ ಈತ ಹೆಂಡತಿ ಜೊತೆ ಜಗಳವಾಡಿ ಕೋಪ ಕಮ್ಮಿ ಮಾಡಿಕೊಳ್ಳಲು ಮಾಡಿದ್ದು ಏನ್ ಗೊತ್ತಾ..!
ಇಟಲಿಯ ನಿವಾಸಿಯಾಗಿರುವ ಈ ಭೂಪ ತನ್ನ ಕೋಪ ಕಡಿಮೆ ಮಾಡಿಕೊಳ್ಳಲು ಬರೋಬ್ಬರಿ 450 ಕಿಲೋ ಮೀಟರ್ ಪಾದೆಯಾತ್ರೆ ಮಾಡಿದ್ದಾನೆ. ಹೌದು ಅಂದ್ಹಾಗೆ ಇಟಲಿಯಲ್ಲಿ ಸದ್ಯ ರಾತ್ರಿ 10ರಿಂದ ಬೆಳಗ್ಗೆ 5 ರವಗೆ ನೈಟ್ ಕರ್ಫ್ಯೂ ಜಾರಿಯಲಿದೆ. ಆದ್ರೆ ಇದನ್ನ ಲೆಕ್ಕಿಸದೇ ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಮಧ್ಯರಾತ್ರಿ 2 ಗಂಟೆ ಹೊತ್ತಿನಲ್ಲಿ ರೋಡ್ ನಲ್ಲಿ ಸುಧೀರ್ಗ ವಾಕ್ ಮಾಡಿದ್ದಾನೆ. ಲಂಬಾರ್ಡಿಯಾದಲ್ಲಿ ಇರೋ ತನ್ನ ಮನೆಯಿಂದ ಬೊಲೋನಾ ಮಾರ್ಗವಾಗಿ ಬಂದಿದ್ದಾನೆ. 48 ವರ್ಷದ ಈ ವ್ಯಕ್ತಿ ಓಡಾಡುತ್ತಿದ್ದನ್ನು ಗಮನಿಸಿದ ಅಧಿಕಾರಿಗಳು ಆತನಿಗೆ ಹಿನ್ನೆಲೆಯಲ್ಲಿ ದಂಡವನ್…
48 ವರ್ಷದ ಈ ವ್ಯಕ್ತಿ ಓಡಾಡುತ್ತಿದ್ದನ್ನು ಗಮನಿಸಿದ ಅಧಿಕಾರಿಗಳು ಆತನಿಗೆ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಿದ್ದಾರೆ. ಬಳಿಕ ಆತ ತನ್ನ ಕಥೆಯನ್ನ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ. ಅಂದ್ಹಾಗೆ ಈ ಸುಧೀರ್ಘ ಕಾಲ್ನಡಿಗೆ ಸುಮಾರು 1 ವಾರ ಸಮಯ ತೆಗೆದುಕೊಂಡಿದೆ. ಇತ್ತ ಆತನ ಪತ್ನಿ ಗಾಬರಿಯಿಂದ ಒಂದು ವಾರದಿಂದ ಪತಿ ನಾಪತ್ತೆಯಾಗಿರೋದಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಳು. ಇತ್ತ ಗಂಡನ ಬಗ್ಗೆ ವಿಷಯ ಗೊತ್ತಾಗ್ತಿದ್ದಂತೆ ಕಾರಿನಲ್ಲಿ ಹೋಗಿ ಆತನನ್ನ ಮನೆಗೆ ವಾಪಸ್ ಕರೆದೊಯ್ದಿದ್ದಾಳೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel