queen-elizabeth-ii-passes-away | ಬ್ರಿಟನ್ ರಾಣಿ ಎಲಿಜಬೆತ್ 2 ಇನ್ನಿಲ್ಲ
ಲಂಡನ್ : ಅನಾರೋಗ್ಯದಿಂದ ಬ್ರಿಟನ್ ರಾಣಿ ಎಲಿಜಬೆತ್ – 2 ಅವರು ನಿಧನರಾಗಿದ್ದಾರೆ.
96 ವರ್ಷದ ರಾಣಿ ಕಳೆದ ವರ್ಷ ಅಕ್ಟೋಬರ್ ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.
ಆದ್ರೆ ಗುರುವಾರ ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಲೆಜಬೆತ್ 2 ಅವರು 1923 ರಿಂದ ಬ್ರಿಟನ್ ನ ರಾಣಿಯಾಗಿದ್ದರು.

ಬಾಲ್ಮೋರಲ್ ಕ್ಯಾಸಲ್ ನಲ್ಲಿ ಎಲಿಜಬೆತ್ ಆರೋಗ್ಯದ ಬಗ್ಗೆ ನಿಗಾ ಇರಿಸಲಾಗಿತ್ತು.
ನಿನ್ನೆ ಬೆಳಗ್ಗೆಯಿಂದಲೇ ರಾಣಿ ಎಲಿಜಬೆತ್ ಅವರನ್ನು ನೋಡಲು ಆರೋಗ್ಯ ವಿಚಾರಿಸಲು ಸಂಬಂಧಿಕರು ದೌಡಾಯಿಸಿದ್ದರು.
ಆದ್ರೆ ರಾತ್ರಿ ವೇಳೆಗೆ ಅವರು ಇಹಲೋಕ ತ್ಯೆಜಿಸಿದ್ದಾರೆ.
ರಾಣಿ ನಿಧನದೊಂದಿಗೆ ಬ್ರಿಟನ್ ಸರ್ಕಾರ ಎಲ್ಲಾ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ರಾಣಿ ಎಲಿಜಬೆತ್ 2 ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.