ADVERTISEMENT
Friday, October 2, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಇಡೀ ಜಗತ್ತನ್ನು ಆತ್ಮವಿಶ್ವಾಸದಿಂದ ಎದುರಿಸಿ ಆತ್ಮಗೌರವದ ಮೂಲಕ ಆವರಿಸಿಕೊಳ್ಳಬಹುದು ಎಂದವಳು ಕ್ವೀನ್ ಆಫ್ ಡಾರ್ಕ್…

admin by admin
June 1, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಕಪ್ಪು ಕತ್ತಲಿನ ಕಡು ವಿಷಾದ ನಿಷಾದ ರಾತ್ರಿಗಳು
ನನ್ನ ಸೋಕಲಾರವು
ಕನಿಷ್ಟ ನನ್ನ ಭಾವಗಳಿಗೆ ಭೀತಿಯನೂ ಹುಟ್ಟಿಸಲಾರವು
ಕಾರಣ ನಾನು ಶ್ವೇತವರ್ಣದ ಸುಕೋಮಲೆಯಲ್ಲ
ನಾನು ಕರಿಯಳು
ಆದರೆ ಈ ತೊಗಲಿನ ಮೇಲಿನ ನನ್ನ ಅಗಾಧ ಪ್ರೇಮ ಕೊನೆಯಾಗುವುದಿಲ್ಲ

ಈ ಸಾಲುಗಳನ್ನು ತನ್ನಷ್ಟಕ್ಕೆ ತಾನೇ ಆಕೆ ಅದೆಷ್ಟು ಬಾರಿ ಹೇಳಿಕೊಂಡಿದ್ದಳೋ. ಅವಳು ಹುಟ್ಟಿದ್ದ ಇಥಿಯೊಪಿಯಾ, ಬೆಳೆದ ದಕ್ಷಿಣ ಸೂಡಾನ್ ಪ್ರಾಂತ್ಯ, ವಲಸೆ ಬಂದ ಯುನೈಟೆಡ್ ಸ್ಟೇಟ್ಸ್ ಎಲ್ಲಾ ಕಡೆಯೂ ನಿರಂತರ ಅದೆಷ್ಟೋ ಬಾರಿ ಅವಮಾನ ಹೀಗಳಿಕೆ ಅನುಭವಿಸಿದಾಗ ಸಾವಿರ ಸಲ ಹೀಗೆಂದುಕೊಂಡಿದ್ದಾಳೆ. ಅವಳ ಚರ್ಮದ ಕಟ್ಟ ಕಪ್ಪು ಬಣ್ಣ ಅವಳನ್ನು ಯಾವತ್ತೂ ಬೇಸರಕ್ಕೆ ದೂಡಿಲ್ಲ. ತನ್ನ ವಿಶಿಷ್ಟ ವಿಚಿತ್ರ ಮೆಲನಿನ್ ವರ್ಣದ್ರವ್ಯ ವಿಶೇಷತೆಗೆ ಅವಳಿಗೆ ಹೆಮ್ಮೆ ಇದೆ. ಒಂದಾನೊಂದು ಕಾಲದಲ್ಲಿ ತನ್ನ 14ನೆಯ ವಯಸ್ಸಿನಲ್ಲಿ ಮೊದಲ ಬಾರಿಗೆ ಮಾಡಲಿಂಗ್ ಎಂಬ ಶಬ್ಧ ಕಿವಿಗೆ ಬಿದ್ದಾಗ, ಅದೊಂದು ಕೆಲಸವೇನೋ ಅದನ್ನು ಮಾಡಿದರೆ ತನ್ನ ಜೀವನ ನಿರ್ವಹಣೆಯಾಗುತ್ತದೆ ಎಂದುಕೊಂಡಿದ್ದ ಅಮಾಯಕಿ ಆಕೆ. ಅಮೇರಿಕನ್ ಇಂಗ್ಲೀಷ್ ಭಾಷೆ ಅರ್ಥವಾಗದೆ ಪಿಳಿ ಪಿಳಿ ಕಣ್ಣು ಬಿಟ್ಟ ಕೃಷ್ಣ ಸುಂದರಿ ಅವಳು. ಆದ್ರೆ ಅವಳ ಅದಮ್ಯ ಆತ್ಮವಿಶ್ವಾಸ ಮತ್ತು ಆತ್ಮಗೌರವದ ಕಾರಣ ಇಂದು ಆಕೆ ವಿಶ್ವದ ಅತ್ಯಂತ ಸೆಲೆಬ್ರಿಟಿ ಮಾಡೆಲ್. ಕ್ವೀನ್ ಆಫ್ ಡಾರ್ಕ್ ಎಂದು ಕರೆಸಿಕೊಳ್ಳುವ ಅವಳಿಗೆ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಬರೋಬ್ಬರಿ 8 ಲಕ್ಷ ಫಾಲೋವರ್ಸ್ ಇದ್ದಾರೆ. ಬ್ಲಾಕ್ ಈಸ್ ಬೋಲ್ಡ್, ಬ್ಲಾಕ್ ಈಸ್ ಬ್ಯೂಟಿಫುಲ್, ಬ್ಲಾಕ್ ಈಸ್ ಗೋಲ್ಡ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಆಕೆಯ ಹೆಸರು ನ್ಯಾಕಿಮ್ ಗ್ಯಾಟ್ ವೆಚ್. 27 ವರ್ಷದ ಮಾಡೆಲ್ ನ್ಯಾಕಿಮ್ ಈಗ ವಿಶ್ವದ ಎಲ್ಲಾ ಕಪ್ಪು ವರ್ಣೀಯರ ಪಾಲಿನ ಹೆಮ್ಮೆ. ಅವಳ ಕಡು ಕಪ್ಪು ಬಣ್ಣವೇ ಅವಳನ್ನು ಮಾಡೆಲಿಂಗ್ ಎನ್ನುವ ರಂಗೀನ್ ಲೋಕದ ಉತ್ತುಂಗಕ್ಕೆ ಕರೆದೊಯ್ದಿದೆ; ಬಣ್ಣಕ್ಕಿಂತ ಮಿಗಿಲಾದ ಅವಳ ಆತ್ಮವಿಶ್ವಾಸ.

Related posts

ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್

ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್

October 2, 2026
ವಿಧಾನ ಪರಿಷತ್ ಗೆ 11 ಜನ ಅವಿರೋಧ ಆಯ್ಕೆ

ಕೆಲಸದ ಊರಲ್ಲೇ ಮನೆ ಮಾಡಬೇಕು ಅಧಿಕಾರಿಗಳು: ಕಚೇರಿ ವೇಳೆಯಲ್ಲಿ ಸಿಗದ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ- ದಿನನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿದ ಸರ್ಕಾರದ ಖಡಕ್ ಆದೇಶ

October 2, 2026

ನ್ಯಾಕಿಮ್ ಗ್ಯಾಟ್ ವೆಚ್ ಜನಿಸಿದ್ದು 27 ಜನವರಿ 1993ರಲ್ಲಿ ಇಥಿಯೋಪಿಯಾದ ಗಂಬೇಲಾದಲ್ಲಿ. ದಕ್ಷಿಣ ಸುಡಾನ್ ನಲ್ಲಿ ಸಂಭವಿಸಿದ ನಾಗರೀಕ ಜನಾಂಗೀಯ ಕಲಹಕ್ಕೂ ಮೊದಲು ಅವಳು ತನ್ನ ಪೋಷಕರೊಂದಿಗೆ ದಕ್ಷಿಣ ಸುಡಾನ್ ಪ್ರಾಂತ್ಯದ ಮೈವುತ್ ನಲ್ಲಿ ವಾಸಿಸುತ್ತಿದ್ದಳು. ನಂತರ ಉಳಿದ ವಲಸಿಗರಂತೆ ನೆಮ್ಮದಿಯ ಬದುಕನ್ನು ಅರೆಸಿಕೊಂಡು ಅವಳ ಫ್ಯಾಮಿಲಿ ಮೊದಲು ಕೀನ್ಯಾದ ರೆಫ್ಯೂಜಿ ಕ್ಯಾಂಪ್ ನಲ್ಲಿ ಕೆಲಕಾಲವಿತ್ತು. ನಂತರ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗೆ ಬಂದಾಗ ನ್ಯಾಕಿಮ್ ವಯಸ್ಸು 14 ವರ್ಷವಷ್ಟೆ. ಮೊದಲು ಅಮೇರಿಕಾದ ನ್ಯೂಯಾರ್ಕ್ ನ ಬಫೆಲೋ ಪಟ್ಟಣದಲ್ಲಿ ಆನಂತರ ಮಿನ್ನೇಸೊಟಾದ ಮಿನ್ನೇಪೋಲೀಸ್ ತಲುಪಿದರು. ದಕ್ಷಿಣ ಸೂಡಾನ್ ಜೊತೆಗಿನ ಭಾವನಾತ್ಮಕ ನಂಟಿನ ಕಾರಣ ಈಗಲೂ ನ್ಯಾಕಿಮ್ ತಾನು ಸೌತ್ ಸೂಡಾನ್ ಬೇಸ್ಡ್ ಮಾಡೆಲ್ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾಳೆ. ಸೆಂಟ್ ಕ್ಲೌಡ್ ಸ್ಟೇಟ್ ಯೂನಿವರ್ಸಿಟಿಯ ಫ್ಯಾಶನ್ ಶೋ ನ್ಯಾಕಿಮ್ ಳ ಮೊದಲ ಮಾಡೆಲಿಂಗ್ ವೇದಿಕೆ. ಕೆಲ ಕಾಲ ಬಫೆಲೋ ದ ಗ್ರಾಸರಿ ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡಿದ ನ್ಯಾಕಿಮ್, ಅಲ್ಲಿ ತನ್ನ ಕಪ್ಪು ಬಣ್ಣದ ತೊಗಲಿನ ಕಾರಣ ಅರೆಕಾಲಿಕ ರೂಪದರ್ಶಿಯಾಗಿ ಕೆಲಸ ಮಾಡಿದ್ದಳು. ಶ್ವೇತ ವರ್ಣದ ತಳುಕುಬಳುಕಿನ ಮಾಡೆಲ್ ಗಳ ಬದಲಿಗೆ ವಿಭಿನ್ನವಾಗಿ ಈ ಕೃಷ್ಣಸುಂದರಿಯನ್ನು ಶೋಕೇಸ್ ಮಾಡಿತ್ತು ಆ ಸೂಪರ್ ಮಾರ್ಕೆಟ್. ಆನಂತರ ನ್ಯಾಕಿಮ್ ಹಿಂತಿರುಗಿ ನೋಡಲಿಲ್ಲ. ಆಕೆಯ ಅಗಾಧ ಆತ್ಮವಿಶ್ವಾಸವನ್ನು ಗುರುತಿಸಿದ ಮಾಡೆಲಿಂಗ್ ಮ್ಯಾಗ್ಜಿನ್ ಜಗತ್ತು ಅವಳಿಗೆ ರೆಡ್ ಕಾರ್ಪೆಟ್ ಸ್ವಾಗತ ಕೋರಿದವು. 2017ರಲ್ಲಿ ತೆರೆಕಂಡ ಹಾಲಿವುಡ್ ಸಿನಿಮಾ ಜಿಗ್ ಸಾನಲ್ಲಿ ನ್ಯಾಕಿಮ್ ಪ್ರಮೋಷನಲ್ ಪೋಸ್ಟರ್ ನಲ್ಲಿ ಕಾಣಿಸಿಕೊಂಡಳು. ರೂಪದರ್ಶಿಗಳಿಗೆ ಬಿಳಿತೊಗಲೆ ಮುಖ್ಯ ಎನ್ನುವ ಸಿದ್ಧ ಮಾದರಿಯನ್ನು ಮುರಿದು ಕಡುಕಪ್ಪು ವರ್ಣೀಯಳೂ ಮಾಡೆಲಿಂಗ್ ಜಗತ್ತಿನ ಔನ್ನತ್ಯ ತಲುಪಬಹುದು ಎಂದು ಸಾಬೀತು ಮಾಡಿದಾಕೆ ನ್ಯಾಕಿಮ್. ಅವಳಿಗೆ ಜಗತ್ತಿನ ಮಾಡೆಲಿಂಗ್ ಕ್ಷೇತ್ರ ಕ್ವೀನ್ ಆಫ್ ಡಾರ್ಕ್ ಎಂದು ಕರೆದಾಗಲೂ ಸಂತೋಷದಿಂದ ಒಪ್ಪಿಕೊಂಡಳು. ಜೀವನದಲ್ಲಿ ಆತ್ಮವಿಶ್ವಾಸವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವದಕ್ಕೆ ಜೀವಂತ ನಿದರ್ಶನವಾದಳು.

 “My chocolate is elegant. So is what I represent… A nation of warriors,” ಇದು ನ್ಯಾಕಿಮ್ ತನ್ನ ಇನ್ ಸ್ಟಾಗ್ರಾಂ ಫೋಟೋ ಒಂದಕ್ಕೆ ಹಾಕಿದ್ದ ಅಡಿಬರಹ. ನ್ಯಾಕಿಮ್ ಎನ್ನುವ ಆಫ್ರಿಕನ್ ಅಮೇರಿಕನ್ ಮಾಡೆಲ್ ಅನ್ನು ಏಕಾಏಕಿ ಜನಪ್ರಿಯಗೊಳಿಸಿದ್ದೇ ಈ ಪೋಸ್ಟ್. ಅವಳ ಚರ್ಮವನ್ನು ಬ್ಲೀಚ್ ಮಾಡಿಸಲು ಒಬ್ಬ ಉಬರ್ ಡ್ರೈವರ್ ಸಲಹೆ ಕೊಟ್ಟಾಗ ಆಕೆ ಜೋರಾಗಿ ನಕ್ಕುಬಿಟ್ಟಿದ್ದಳಂತೆ. ನ್ಯಾಕಿಮ್ ಅಭಿಮತ ಇಷ್ಟೇ, ನೀವು ನಿಮ್ಮ ತೊಗಲನ್ನು ಪ್ರೀತಿಸದೇ ಇದ್ದರೇ ನಿಮ್ಮ ವ್ಯಕ್ತಿತ್ವವನ್ನು ಪ್ರೀತಿಸಲಾರಿರಿ.

“You are beyond beautiful and the love I have for you is unconditional because you are me,” ಇದು ನ್ಯಾಕಿಮ್ ಗಳ ಮತ್ತೊಂದು ಪ್ರಸಿದ್ಧ ಪೋಸ್ಟ್. ಇಷ್ಟೇ ಅಲ್ಲ ವಿಶ್ವದಾದ್ಯಂತ ಇರುವ ಎಲ್ಲಾ ಕರಿ ಜನರ ಪ್ರತಿನಿಧಿಯಾಗಿರುವ ಆಕೆ ತನ್ನ ಚರ್ಮದ ಬಣ್ಣವನ್ನು ಪ್ರಕೃತಿಯ ಬಣ್ಣವೆಂದಾಗಿ ಭಾವಿಸುತ್ತಾಳೆ. ಅದಕ್ಕೆ ಉದಾಹರಣೆ ಅವಳ ಈ ಮಾತು “My skin absorbs the suns rays and my hair defies gravity. Now you can’t tell me I’m not magical!”

“Let’s show the world how beautiful and intelligent we are apart from just being dark skinned” ಎನ್ನುವ ನ್ಯಾಕಿಮ್ ತನ್ನೊಳಗಿರುವ ಆತ್ಮವಿಶ್ವಾಸ ಮತ್ತು ಆತ್ಮ ಗೌರವದ ಮುಂದೆ ಪ್ರಪಂಚದ ಉಳಿದೆಲ್ಲಾ ವಸ್ತು, ವ್ಯಕ್ತಿ, ವಿಚಾರಗಳೂ ನಗಣ್ಯ ಎಂದು ಬಗೆಯುತ್ತಾಳೆ. ಇದೇ ನ್ಯಾಕಿಮ್ ಳ ಯಶೋಗಾಥೆಯ ಹಿಂದಿರುವ ರಹಸ್ಯ.

-ವಿಭಾ (ವಿಶ್ವಾಸ್ ಭಾರದ್ವಾಜ್)

Tags: EthiopiaVibha
ShareTweetSendShare
Join us on:

Related Posts

ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್

ಪಟಾಕಿ ಸಂಪೂರ್ಣ ನಿಷೇಧವಿಲ್ಲ, ಅನಿಯಂತ್ರಿತ ಬಳಕೆಗೂ ಅವಕಾಶವಿಲ್ಲ: ಸುಪ್ರೀಂಕೋರ್ಟ್

by Shwetha
October 2, 2026
0

ದೀಪಾವಳಿ ಸೇರಿದಂತೆ ಹಬ್ಬಗಳ ಸಂದರ್ಭದಲ್ಲಿ ಪಟಾಕಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ನಿಲುವು ವ್ಯಕ್ತಪಡಿಸಿದೆ. ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಿಲ್ಲ, ಆದರೆ ದಿನದ 24 ಗಂಟೆಯೂ...

ವಿಧಾನ ಪರಿಷತ್ ಗೆ 11 ಜನ ಅವಿರೋಧ ಆಯ್ಕೆ

ಕೆಲಸದ ಊರಲ್ಲೇ ಮನೆ ಮಾಡಬೇಕು ಅಧಿಕಾರಿಗಳು: ಕಚೇರಿ ವೇಳೆಯಲ್ಲಿ ಸಿಗದ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ- ದಿನನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿದ ಸರ್ಕಾರದ ಖಡಕ್ ಆದೇಶ

by Shwetha
October 2, 2026
0

ಬೆಂಗಳೂರು: ರಾಜ್ಯದ ಸಾರ್ವಜನಿಕ ಸೇವೆಯಲ್ಲಿ ಶಿಸ್ತು ತರಲು ಮತ್ತು ಜನರ ಕೆಲಸಗಳು ವಿಳಂಬವಿಲ್ಲದೆ ನಡೆಯುವಂತೆ ಮಾಡಲು ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರಾಜ್ಯ ಸರ್ಕಾರದ...

ಬಜೆಟ್ ಭಾರಕ್ಕೆ ನಲುಗಿದ DK ಸರ್ಕಾರ ಗ್ಯಾರಂಟಿ ನಿಯಮಗಳಲ್ಲಿ  ಬದಲಾವಣೆ ತರುವ ಸುಳಿವು ನೀಡಿದ CM ಡಿ ಕೆ ಶಿವಕುಮಾರ್

SIR ನೆಪದಲ್ಲಿ ಮತದಾರರ ಹೆಸರು ತೆಗೆಯುವ ಆರೋಪ: ಬಿಎಲ್‌ಎ, ಬಿಎಲ್‌ಒಗಳಿಗೆ ಡಿಕೆ ಶಿವಕುಮಾರ್ ಮನವಿ

by Shwetha
October 2, 2026
0

ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಿಂದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ವಿಶೇಷವಾಗಿ...

ಜನರ ಕೈಗೆ ಸಿಗದ ಶಾಸಕ ನಮಗೆ ಬೇಡ: ಪ್ರದೀಪ್ ಈಶ್ವರ್ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು, 2028 ಕ್ಕೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರಿಗೆ ಕಾಂಗ್ರೆಸ್ ಮುಖಂಡರ ಪಟ್ಟು

ಪ್ರದೀಪ್ ಈಶ್ವರ್ ಗೆ ಟಿಕೆಟ್ ಕಟ್ ಮಾಡಲು ಕೆಪಿಸಿಸಿ ಅಧ್ಯಕ್ಷರ ಮುಂದೆ ಮುಖಂಡರ ಪರೇಡ್:ನನ್ನ ಬೆಳವಣಿಗೆ ಸಹಿಸಲಾಗದವರ ಪಿತೂರಿ ಇದು- ದೂರು ನೀಡಿದ ಸ್ವಪಕ್ಷೀಯರ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು

by Shwetha
October 2, 2026
0

ಚಿಕ್ಕಬಳ್ಳಾಪುರ: ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಈಗ ಸ್ವಪಕ್ಷೀಯರೇ ದೊಡ್ಡ ಕಂಟಕವಾಗಿ ಪರಿಣಮಿಸಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು...

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

ಅಂದು ಗುರು ಇಂದು ವಿರೋಧಿ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ನಡುವೆ ಶುರುವಾಯ್ತು ರಾಜಕೀಯ ಕೆಸರೆರಚಾಟ

by Shwetha
October 2, 2026
0

ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ಶಾಶ್ವತ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ ಎಂಬ ಮಾತಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಈಗ ಸಾಕ್ಷಿಯಾಗುತ್ತಿದೆ. ಚುನಾವಣೆ ಮುಗಿದ ಹೊಸತರಲ್ಲಿ ಅಣ್ಣ... ಗುರು... ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram