ಹಿಂದೂಗಳನ್ನ ಹಿಯಾಳಿಸೋದೆ ಸಿದ್ದರಾಮಯ್ಯ ಚಾಳಿ : ಅಶೋಕ್ ಗರಂ
ಬೆಂಗಳೂರು ; ಹಿಂದೂಗಳನ್ನ ಹಿಯಾಳಿಸೋದೆ ಇವರ ಚಾಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿವಾದಿತ ಮಂದಿರಕ್ಕೆ ನಾನು ದೇಣಿಗೆ ಕೊಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಬಿಜೆಪಿಗರು ಸಿದ್ದರಾಮಯ್ಯರ ಈ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಅದರ ಮುಂದುವರಿದ ಭಾಗವಾಗಿ ಇಂದು ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ವಿಧಾನ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಸಿದ್ದರಾಮಯ್ಯ ಸಿದ್ದರಾಮಯ್ಯ ವಕೀಲರು ಆಗಿದ್ದವರು.
ಸುಪ್ರೀಂಕೋರ್ಟ್ ಸ್ಪಷ್ಟವಾದ ತೀರ್ಪು ಕೊಟ್ಟಿದೆ. ಸುಪ್ರೀಂಕೋರ್ಟ್ ತೀರ್ಪು ಬಗ್ಗೆ ಇವರಿಗೆ ನಂಬಿಕೆ ಇಲ್ಲವಾ.. ಎಂದು ಪ್ರಶ್ನಿಸಿದರು. ಹಾಗೇ ಇಷ್ಟ ಇದ್ರೆ ದೇಣಿಗೆ ಕೊಡಲಿ ಇಲ್ಲದೇ ಇದ್ದರೆ ಸುಮ್ಮನಿರಿ.
ಕೊಡಬಾರದು ಅಂತಾ ಯಾಕೆ ಹೇಳಬೇಕು ಎಂದು ಗರಂ ಆದರು.
ಇದನ್ನೂ ಓದಿ : ರೈಲ್ ರೋಕೊ ಚಳವಳಿ : ಬೀದರ್ ನಲ್ಲಿ ರೈತರ ಬೆಂಬಲ
ಇನ್ನು ಇವರು ರಾಮಮಂದಿರವಾದ್ರೂ ಕಟ್ಟಲಿ, ಅಲ್ಲಾ ಮಂದಿರವಾದ್ರೂ ಕಟ್ಟಲಿ. ಮಸೀದಿ, ಚರ್ಚ್ ಕಟ್ಟುವ ಬಗ್ಗೆ ಏನಾದರೂ ಮಾತನ್ನಾಡಿದ್ದಾರಾ ಎಂದು ಪ್ರಶ್ನಿಸಿದ ಆರ್.ಅಶೋಕ್, ಹಿಂದೂಗಳನ್ನ ಹಿಯಾಳಿಸೋದೆ ಇವರ ಚಾಳಿ ಎಂದು ವಾಗ್ದಾಳಿ ನಡೆಸಿದರು.