R. Ashok | ಮಂಡ್ಯದಲ್ಲಿ ಪಕ್ಷ ಸಂಘಟನೆ ಚಾಲೆಂಜ್ ಇದೆ
ಮಂಡ್ಯ : ಮಂಡ್ಯದಲ್ಲಿ ಪಕ್ಷ ಸಂಘಟನೆ ಚಾಲೆಂಜ್ ಇದೆ ಎಂದು ಆರ್.ಅಶೋಕ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಹಿಂದೆ ಹಲವು ಬಾರಿ ಮಂಡ್ಯದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಈ ಬಾರಿ ಕಂದಾಯ ಸಚಿವನಾಗಿ ಸಂತೋಷ, ಸಂಭ್ರಮದಿಂದ ಧ್ವಜಾರೋಹಣ ನಡೆಸಲು ಬಂದಿದ್ದೀನಿ. ಮಂಡ್ಯದಲ್ಲಿ ಪಕ್ಷ ಸಂಘಟನೆ ಚಾಲೆಂಜ್ ಇದೆ. ನಿನ್ನೆ ಎಂಪಿಯವರು ಮಂಡ್ಯ ಜನರಿಗೆ ಸ್ವಾತಂತ್ರ್ಯ ಬೇಕು ಎಂದಿದ್ದಾರೆ. ಉಸ್ತುವಾರಿ ಸಚಿವನಾಗಿದ್ದಾಗ ಹಲವು ಅಭಿವೃದ್ದಿಗಳನ್ನ ಮಾಡಿದ್ದೇನೆ. ಇವತ್ತು ಧ್ವಜಾರೋಹಣವನ್ನ ಮಂಡ್ಯದಲ್ಲಿ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದರು.
ಸಚಿವರ ಆತುರಕ್ಕೆ 20 ಮಕ್ಕಳ ತಂಡದ ಪಥಸಂಚಲನಕ್ಕೆ ಬ್ರೇಕ್ ವಿಚಾರವಾಗಿ ಪ್ರತಿಕ್ರಿಯಿಸಿ, ಬೆಂಗಳೂರಲ್ಲಿ ಮತ್ತೊಂದು ಧ್ವಜಾರೋಹಣ ಕಾರ್ಯಕ್ರಮವಿದೆ. ಅಲ್ಲಿಯು 50 ಸಾವಿರ ಜನರ ನಡುವೆ ಕಾರ್ಯಕ್ರಮ ನಡೆಯುತ್ತಿದೆ. ಅದರ ಉಸ್ತುವಾರಿಯನ್ನ ನಾನೇ ವಹಿಸಿಕೊಂಡಿದ್ದೇನೆ. ಮಂಡ್ಯದಲ್ಲಿನ ಧ್ವಜಾರೋಹಣ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಅಲ್ಲಿನ ಧ್ವಜಾರೋಹಣ. ನಾನು ವೈಯಕ್ತಿಕ ಕಾರ್ಯಕ್ರಮಕ್ಕಾಗಿ ಹೋಗ್ತಿಲ್ಲ. ಚಾಮರಾಜಪೇಟೆಯಲ್ಲೆ ಧ್ವಜಾರೋಹಣ ನಿದಗಿಯಾಗಿತ್ತು. ಆದ್ರೆ ಮಂಡ್ಯದ ಮೇಲಿನ ಪ್ರೀತಿಗಾಗಿ ಮಂಡ್ಯವನ್ನ ಆಯ್ಕೆ ಮಾಡಿಕೊಂಡು ಧ್ವಜಾರೋಹಣ ನಡೆಸಿದ್ದೀನಿ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.