ಮತ್ತೆ ಲಾಕ್ ಡೌನ್ ಎಚ್ಚರಿಕೆ ನೀಡಿದ ಸಚಿವ ಆರ್ ಅಶೋಕ್
ಬೆಂಗಳೂರು : ಕೋವಿಡ್ 2ನೇ ಅಲೆ ನಿಯಂತ್ರಣಕ್ಕಾಗಿ ಜಜಾರಿಗೊಳಿಸಲಾಗಿದ್ದ ಲಾಕ್ ಡೌನ್ ಇತ್ತೀಚೆಗಷ್ಟೇ ಸಡಿಲಿಕೆಗೊಂಡಿದ್ದು, ಬಹುತೇಕ ಎಲ್ಲಾ ಚಟುವಟಿಗಳಿಗೂ ಅನುಮತಿ ಸಿಕ್ಕಿದೆ.. ಆದ್ರೆ ಜನ ಕೊರೊನಾ ನಿಯಮ ಪಾಲಿಸದಿದ್ದರೆ ಮತ್ತೆ ಲಾಕ್‍ಡೌನ್ ಮಾಡಬೇಕಾಗುತ್ತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಲಸಿಕೆ ಹಾಕಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಇಲ್ಲದಿದ್ದರೆ ಮೂರನೆ ಬಾರಿಗೆ ಲಾಕ್‍ಡೌನ್ ಆಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಉಪಮೇಯರ್ ಎಲ್.ಶ್ರೀನಿವಾಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕೊರೊನಾ ಸಂಕಷ್ಟಕ್ಕೆ ಈಡಾಗಿರುವ ಒಂದು ಸಾವಿರ ಆಟೋ ಚಾಲಕರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಉಚಿತ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಕಳೆದ 18 ತಿಂಗಳಿನಿಂದ ಕಾಡುತ್ತಿರುವ ಕೊರೊನಾ ಸಂದರ್ಭದಲ್ಲಿ ಪದ್ಮನಾಭನಗರದಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ ಮತ್ತು ಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ಆಹಾರ, ಔಷಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ ಎಂದರು.